ಅಂದಿನ ಮದ್ರಾಸ್ ಪಠ್ಯ ಪುಸ್ತಕಗಳ ಸಮಿತಿಯು ವಿವಿಧ ಕ್ಲಾಸುಗಳಿಗೆ ಸೇರ್ಪಡೆಗೊಳಿಸಲು ಶಿಫಾರಸು ಮಾಡಿದ ಕೃತಿ-ಐತಿಹಾಸಿಕ ಕಥಾವಳಿ. ಹಿರಿಯ ಕವಿ ಪಂಜೆ ಮಂಗೇಶರಾಯರು ಬರೆದಿದ್ದು, ಮದ್ರಾಸ್ ಸರ್ಕಾರದ ಅನುವಾದಕರಾಗಿದ್ದ ಬೆನಗಲ್ ರಾಮರಾವ್ ಅವರು ಹೊರಡಿಸುತ್ತಿದ್ದ ‘ಸುವಾಸಿನಿ ’ ಮಾಸಪತ್ರಿಕೆಯಲ್ಲಿ ಇಲ್ಲಿಯ ಬಹುತೇಕ ಕಥೆಗಳು , ಕಾದಂಬರಿ ಎಂಬಂತೆ ಸುದೀರ್ಘ ರೂಪದಲ್ಲಿ ಪ್ರಕಟಗೊಂಡಿದ್ದವು. ಅವುಗಳನ್ನು ಸಂಗ್ರಹಿಸಿದ್ದೇ ಈ ಕೃತಿ. ಔರಂಗಜೇಬನ ಆಡಳಿತ, ಶಿವಾಜಿ ಮಹಾರಾಜರ ಸೆರೆ, ರಾಜಹಂಸ, ಶೈಲಿನಿ ಇಂತಹ ಪ್ರಸಂಗಗಳಿಂದ ಕೂಡಿದ ಕಥಾನಕಗಳು ಒಳಗೊಂಡಿವೆ.
ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 1874 ಫೆಬ್ರುವರಿ 22 ರಂದು ಜನಿಸಿದರು. ತಾಯಿ ಸೀತಮ್ಮ. ತಂದೆ ರಾಮಪಯ್ಯ. ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಹರಟೇಮಲ್ಲ, ರಾಮಪಂ, ಕವಿಶಿಷ್ಯ ಮುಂತಾದ ಹೆಸರುಗಳಲ್ಲಿ ಬರಹಗಳನ್ನು ರಚಿಸಿದ್ದರು. ಇವರು ಬರೆದ ಹುತ್ತರಿ ಹಾಡು ಕೊಡಗಿನ ನಾಡಗೀತೆಯಾಯಿತು. ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ಇವರು ಬಾಲ ಸಾಹಿತ್ಯಮಂಡಲ ಸಂಸ್ಥೆಯನ್ನು ರಚಿಸಿ ಬಾಲಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದರು. ಮಂಗೇಶರಾಯರ ಪ್ರಮುಖ ಕೃತಿಗಳೆಂದರೆ ಪಂಚಕಜ್ಜಾಯ, ತೂಗುವ ತೊಟ್ಟಿಲು, ...
READ MORE