ಕಥೆಗಾರ, ಬರಹಗಾರರಾದ ವಸುಧೇಂದ್ರ ಅವರ ಕೃತಿ ’ಮೋಹನಸ್ವಾಮಿ’.
ಕನ್ನಡ ಸಾಹಿತ್ಯ ಲೋಕದಲ್ಲಿ ಸಲಿಂಗಿಗಳ ಬಗ್ಗೆ ಪರಿಚಯಿಸುವ ಮೂಲಕ ಹೊರಬಂದ ಮೋಹನಸ್ವಾಮಿ ಕೃತಿಯು ಲೇಖಕರ ಆತ್ಮಕತೆಯೂ ಹೌದು. ”
’ಮೋಹನಸ್ವಾಮಿ’ ಹನ್ನೊಂದು ಸಣ್ಣ ಕಥೆಗಳು ಹಾಗು ಒಂದು ಪದ್ಯವನ್ನೊಳಗೊಂಡಿದೆ. ಅದರಲ್ಲಿ ಆರು ಕಥೆಗಳು ಮೋಹನಸ್ವಾಮಿಯ ಕುರಿತಾಗಿದ್ದು ಮಿಕ್ಕವು ಬೇರೆ ಪಾತ್ರಗಳನ್ನು ನಿರೂಪಿಸುತ್ತವೆ. ‘ತುತ್ತತುದಿಯಲ್ಲಿ ಮೊಟ್ಟಮೊದಲು’ ಮೋಹನಸ್ವಾಮಿಯ ಪರಿಚಯಾತ್ಮಕ ಕಥೆಯಾಗಿದ್ದು ಲಿಂಗ ಬದಲಾವಣೆಯ ನಂತರದ ಸಾಮಾಜಿಕ ಜೀವನದಲ್ಲಿ ತನ್ನ ಸತತ ನೋವಿನ ಸೆಲೆಯನ್ನು, ಅಪರಾಧಿ ಮನೋಭಾವನೆಯನ್ನು ಮುಂದಿಡುತ್ತದೆ. ‘ಕಗ್ಗಂಟು’ ಮೋಹನಸ್ವಾಮಿಯು ತನ್ನ ಪ್ರೇಯಸಿಯನ್ನು ಕಳೆದುಕೊಳ್ಳುವ ಹಾಗು ಒಂದು ಹುಡುಗಿಯ ಒಡನಾಟದ ಕುರಿತಾದ ಕತೆಯಿದೆ.
ವಸುಧೇಂದ್ರ ಅವರು ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು. ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಆನಂತರ ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಯ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅವರು ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು, ಸದ್ಯಕ್ಕೆ ಸಾಹಿತ್ಯಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ...
READ MORE