`ಆಕಾಶಕ್ಕೊಂದು ಏಣಿ’ ಅನುಜಯಾ ಎಸ್. ಕುಮಟಾಕರ್ ಅವರ ಕಥಾಸಂಕಲನವಾಗಿದೆ. ಕಥೆಗಳಲ್ಲಿನ ವ್ಯಕ್ತಿಗಳು ಸಹಜವಾಗಿ ಮಾತನಾಡುವರೇ ಹೊರತು ಇತರರ ಒತ್ತಾಯದ ಹೇರಿಕೆಯ. ಅಸಹಜ ರೀತಿಯಿಂದಲ್ವ ವಸ್ತುಗಳಿಗಾಗಿ ಬಹಳ ತಡಕಾಡದೆ ಮೂಡಿದ 14 ಕಥೆಗಳ ಸಂಕಲನ ಆಕಾಶಕ್ಕೊಂದು ಏಣಿ .
ಕಥೆಗಾರ್ತಿ ಅನುಜಯಾ ಎಸ್. ಕುಮಟಾಕರ್ ಅವರು ಉತ್ತರ ಕನ್ನಡ ಜಿಲ್ಲೆಯವರು. ತಂದೆ ಶಿವಾಜಿ ಜಿ. ಕುಮಟಾಕರ್, ತಾಯಿ ಸುಲೋಚನಾ ಎಸ್. ಕುಮಟಾಕರ್. ’ಆಕಾಶಕ್ಕೊಂದು ಏಣಿ’ ಅವರ ಕಥಾ ಸಂಕಲನ 2002ರಲ್ಲಿ ಬಿಡುಗಡೆಯಾಯಿತು.ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ 2004ರಲ್ಲಿ ದೊರೆತಿದೆ. ...
READ MOREಹೊಸತು- 2003- ಏಪ್ರಿಲ್
ಪರಿವರ್ತನಶೀಲ ಸಮಾಜದ ನಾಡಿಮಿಡಿತವನ್ನು ಮೊದಲೇ ಊಹಿಸಿಕೊಂಡು ಸಾಮಾಜಿಕ ಬದುಕನ್ನು ಅಲ್ಲಿ ಕೇಂದ್ರೀಕರಿಸಿ ಕಥೆ ಹೇಳುವ ಜಾಣೆ ಇಲ್ಲಿನದು. ಯಾವುದೂ ಇದ್ದಂತಿರುವುದಿಲ್ಲವಾದರೂ ಹೊಸತನಕ್ಕೆ ಹಳೆಯ ನಂಟು ಬೇಕೇ ಬೇಕು. ಇಲ್ಲವಾದಲ್ಲಿ ಬಂಧನಗಳಿಗೆ ಯಾವ ಅರ್ಥವೂ, ಬೆಲೆಯೂ ಬರುವುದಿಲ್ಲ. ಕಥೆಗಳಲ್ಲಿನ ವ್ಯಕ್ತಿಗಳು ಸಹಜವಾಗಿ ಮಾತನಾಡುವರೇ ಹೊರತು ಇತರರ ಒತ್ತಾಯದ ಹೇರಿಕೆಯ ಅಸಹಜ ರೀತಿಯಿಂದಲ್ಲ, ವಸ್ತುಗಳಿಗಾಗಿ ಬಹಳ ತಡಕಾಡದೆ ಮೂಡಿದ ೧೪ ಕಥೆಗಳ ಸಂಕಲನ.