ಹಿಂದು-ಮುಸ್ಲಿಂ ಮತ್ತು ಇತರ ಕಥೆಗಳು ಎಂಬ ಪುಸ್ತಕವು ಪಾ.ವೆಂ. ಆಚಾರ್ಯ ಅವರ ಕಥಾ ಸಂಕಲನ. ಈ ಪುಸ್ತಕದಲ್ಲಿಸಂಗ್ರಹಿತವಾದ ಕತೆಗಳಲ್ಲಿ ಹೆಚ್ಚಿನವು ಹಳೆಕಾಲದವು. ಈ ಅಂಶವನ್ನು ಎತ್ತಿಹೇಳುವ ಕಾರಣವೆಂದರೆ, ರಚಿತವಾದ ಕಾಲ ಹಿಂದಿನದಾಗಿದ್ದರೂ ತಮ್ಮ ವಿಶಿಷ್ಟ ಸನ್ನಿವೇಶ ಹಾಗೂ ಅನಿರೀಕ್ಷಿತ ತಿರುವುಗಳಿಂದಾಗಿ ಹೊಸ ಕಾಲದ ಕಥನಕ್ರಮವನ್ನೂ ನಿವಾಳಿಸುವಂತಿವೆ. ಶೀರ್ಷಿಕೆಯನ್ನು ಪಡೆದುಕೊಂಡಿರುವ ಹಿಂದೂ ಮುಸ್ಲಿಂ ಕತೆಯನ್ನೇ ತೆಗೆದುಕೊಳ್ಳಿರಿ. ಇದೇನೋ ಹಿಂದೂ ಮುಸ್ಲಿಂ ಐಕ್ಯತೆಯನ್ನು ಹೇಳಹೊರಟಿರುವ ಕತೆಯೆಂದು ನಮಗೆ ಅನಿಸಬಹುದು. ಆದರೆ ಆ ಘರ್ಷಣೆಯ ದುರುಪಯೋಗದ ಬಗ್ಗೆ ಈ ಕಥೆ ವಿವರಿಸುತ್ತದೆ ಎಂದು ಈ ಕೃತಿಯ ವಿಶಿಷ್ಟತೆಯನ್ನು ಹೇಳಲಾಗಿದೆ.
ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್' ಸೇರಿದರು. ...
READ MORE