ಸೃಜನಶೀಲ ಬರಹಗಾರ ಯೋಗೇಶ್ ಮಾಸ್ಟರ್ ಅವರ ಐದು ಸಣ್ಣಕತೆಗಳ ಸಂಕಲನ ಇದು. ಸಮಾನಾಂತರ ರೇಖೆಗಳು, ಕೃತಿಚೋರ, ಪಾತಕಿ, ಆನಂದವನದ ಮರಗಳು, ಆನಂದ ಮಂಗಳ ಕತೆಗಳ ಮೂಲಕ ಹೊಸ ಬಗೆಯ ಕಥನ ನಿರೂಪಣೆಗೆ ಮುಂದಾಗಿದ್ದಾರೆ ಅವರು.
ಮನುಷ್ಯ ಸಂಬಂಧ, ಸಾಮಾಜಿಕ ವ್ಯವಸ್ಥೆ, ಮಾನವ ನಡವಳಿಕೆಯ ವಿಶೇಷ, ವಿರೋಧಾಭಾಸ ಈ ಕಥೆಗಳ ಮೂಲಸೆಲೆ.
ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...
READ MORE