ಡ್ರಾಮಾ ಕಂಪನಿ ಪತ್ರಕರ್ತ ರಾಜೇಶ್ ಶೆಟ್ಟಿಯವರ ಚೊಚ್ಚಲ ಕಥಾ ಸಂಕಲನ. ಲೇಖಕರು ಮೂಲತಃ ಮಂಗಳೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ಕನ್ನಡಪ್ರಭ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಜನ್ಮಭೂಮಿ ಮಂಗಳೂರು ಮತ್ತು ಕರ್ಮಭೂಮಿ ಇವೆರಡೂ ಊರುಗಳು ಅವರ ಅಂತರಂಗದ ಜಗತ್ತನ್ನು ಆಳುತ್ತಿವೆ. ಇಲ್ಲಿನ ಕತೆಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಆಗಾಗ ನಿಮಗೆ ಎದುರಾಗುತ್ತಾ ಹೋಗುತ್ತದೆ. ಯಕ್ಷಗಾನದ ಚಂಡೆ ಪೆಟ್ಟಿನ ಸದ್ದು, ಬೆಂಗಳೂರಿನ ಬಿಯರ್ ಕ್ಲಬ್ಬಿನ ಡಿಜೆ ಮ್ಯೂಸಿಕ್ಕು ಎಲ್ಲಿ ಏಕಕಾಲಕ್ಕೆ ನಿಮಗೆ ಕೇಳಿಸುವ ಸಾಧ್ಯತೆಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಬಹುತೇಕ ಕತೆಗಳಲ್ಲಿ ವಿಷಾದವೊಂದು ನಿಧಾನವಾಗಿ ಪ್ರವಹಿಸುತ್ತಿವೆ. ಹೊಸ ಕಾಲದ ಸೋಷಿಯಲ್ ಮೀಡಿಯಾಗಳಿಂದ ಹಿಡಿದು ಶೆಣೈ ಬೀಡಿಯವರೆಗೆ ಎಲ್ಲವೂ ಈ ಕಥಾ ಸಂಕಲನದ ಪಾತ್ರಗಳಾಗಿ ಮೂಡಿಬಂದಿರುವುದು ವಿಶೇಷ. ಪ್ರದೀಪ್ ಬತ್ತೇರಿಯವರ ಆಕರ್ಷಕ ಮುಖಪುಟ ಎಲ್ಲರ ಗಮನ ಸೆಳೆಯುವಂತಿದೆ.
ಲೇಖಕ ರಾಜೇಶ್ ಶೆಟ್ಟಿ(1988) ಅವರು ಮೂಲತಃ ಮೂಡಬಿದರೆಯವರು. ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಡೇಂಜರ್ zone’ ಅವರ ಮೊದಲ ಕೃತಿ. ಅವರ ಹಲವಾರಿ ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...
READ MORE