ಒಟ್ಟು 111 ಸಣ್ಣ ಕಥೆಗಳಿರುವ ಸಂಕಲನ-ಚಕ್ರ. ವೃತ್ತಿಯಲ್ಲಿ ಪಶುವೈದ್ಯರಾಗಿರುವ ಲೇಖಕ ಡಾ. ಗವಿಸ್ವಾಮಿ ಎನ್, ತಮ್ಮ ವೃತ್ತಿ ಜೀವನದಲ್ಲಿ ಕಂಡ ರೈತರ ಬದುಕು, ರೈತ ಸಂಬಂಧಿ ಚಟುವಟಿಕೆಗಳು, ರೈತರ ನಂಬಿಕೆ, ಮನೋವ್ಯಾಪಾರಗಳು ಇತ್ಯಾದಿ ವಿಷಯ ವಸ್ತುಗಳಾಗಿಸಿದ್ದು, ತೀರಾ ಸರಳ ಭಾಷೆಯಲ್ಲಿ ಹಾಗೂ ಗಾತ್ರದಲ್ಲೂ ಚಿಕ್ಕದಾಗಿ ಕಥೆಗಳನ್ನು ಬರೆದಿದ್ದಾರೆ.
ಲೇಖಕ ಡಾ. ಗವಿಸ್ವಾಮಿ ಎನ್. ಅವರು ವೃತ್ತಿಯಲ್ಲಿ ಪಶುವೈದ್ಯರಾಗಿದ್ದಾರೆ. ಸದ್ಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಪಶುಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹವ್ಯಾಸಿ ಬರಹಗಾರನಾಗಿರುವ ಅವರ ಚೊಚ್ಚಲ ಕೃತಿ "ಚಕ್ರ" ಎಂಬ ಅತಿ ಸಣ್ಣಕಥೆಗಳ ಸಂಕಲನ ಕನ್ನಡ ಸಾಹಿತ್ಯಾಸಕ್ತರ ಗಮನ ಸೆಳೆದು ಎರಡನೇ ಮುದ್ರಣ ಕಂಡಿದೆ. ಗವಿಸ್ವಾಮಿ ಅವರ ಎರಡನೇ ಕೃತಿ "ಪ್ರಾಣಿಗಳೇ ಗುಣದಲಿ ಮೇಲು!" ಅನುಭವ ಕಥನ ಪಶುಪಕ್ಷಿ ಪ್ರಕಾಶನದಿಂದ ಪ್ರಕಟವಾಗಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಹೂವಿನಹಡಗಲಿಯ ಟಿ.ಎಂ.ಆರ್ ಪಬ್ಲಿಕೇಷನ್ಸ್ ವತಿಯಿಂದ ಕೊಡಲಾಗುವ ಸುಲೋಚನ ಸಾಹಿತ್ಯ ಪ್ರಶಸ್ತಿ, ಹಾಗೂ ತುಮಕೂರಿನ ಗುರುಕುಲ ಪ್ರತಿಷ್ಠಾನದಿಂದ ಗುರುಕುಲ ...
READ MORE