ಲೇಖಕ ಅಬ್ಬಾಸ್ ಅಲಿ ಅಬ್ದುಲ್ ನದಾಫ್ ಅವರ ಕಥಾ ಸಂಕಲನ-ಸಿರಿನಾಡ ಸೊಬಗು. ಮೊಬೈಲ್ ಮರಳಿ ಬಾರದವ ಸ್ವಾಭಿಮಾನಿ ದ್ಯಾವ್ರು ಬದುಕು ಗೆದ್ದವಳು ಪ್ರಯಾಣ ಹಣೆಬರಹ ಹೀಗೂ ಉಂಟೆ ಮರಳಿ ನೋಡಿದಾಗ ಮಾದೇವ ಮಾಸ್ತರ್ ಬುಟ್ಟಿ ಮಾರುವವಳು ಧಾರಾವಾಹಿ ಸತ್ತ ಮಿನಿ ಕಥೆಗಳು ಹೀಗೆ 15 ಕಥೆಗಳು ಒಳಗೊಂಡಿವೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರನ್ನು ಸೆಳೆಯುತ್ತವೆ.
ಲೇಖಕ ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾತೋಳಿ ಗ್ರಾಮದವರು. ಎಂ.ಎ. ಕನ್ನಡ ಸ್ಮಾತಕೋತ್ತರ ಪದವೀಧರರು. ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ, ಕಲಬುರಗಿ ಸಾಹಿತ್ಯ ಮಂಟಪದ ಕಾರ್ಯದರ್ಶಿ, ಅಫಜಲಪುರದ ಸಾಹಿತ್ಯ ವೇದಿಕೆ ಕಾರ್ಯದರ್ಶಿ, ಅಫಜಲಪುರ ತಾಲೂಕಿನ ಕರಜಗಿಯಲ್ಲಿ ನಡೆದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿ, ಕರ್ನಾಟಕ ಜನಪದ ಪರಿಷತ್ತಿನ ತಾಲೂಕು ಆಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ, ಮಾತೋಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿದ್ದಾರೆ. ಕಲಬುರಗಿ, ಬೆಂಗಳೂರು ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. ಕವಿಗೋಷ್ಠಿ, ...
READ MORE