ಸಕ್ಕರೆ ಬೊಂಬೆ ಹಾಗೂ ಇತರ ಕತೆಗಳು

Author : ರಾಮಚಂದ್ರ ಎಸ್.‌ ಕುಲಕರ್ಣಿ

Pages 152

₹ 110.00




Year of Publication: 2014
Published by: ಸುಂದರ ಪುಸ್ತಕ ಪ್ರಕಾಶನ
Address: ಶಕ್ತಿ ನಗರ, ಧಾರವಾಡ- 4
Phone: 9448556458

Synopsys

ಲೇಖಕ ರಾಮಚಂದ್ರ ಎಸ್.‌ ಕುಲಕರ್ಣಿ ಅವರ ಕಥಾಸಂಕಲನ ಕೃತಿ ʻಸಕ್ಕರೆ ಬೊಂಬೆ ಹಾಗೂ ಇತರ ಕತೆಗಳುʼ. ಲೇಖಕ ಪ್ರೊ. ರಾಜಪ್ಪ ದಳವಾಯಿ ಅವರು, “ಸಕ್ಕರೆ ಗೊಂಬೆ- ಮಕ್ಕಳಿಗೆ ಕೊಡುವ ಆಟದ ಸಾಮಾನು ಹೌದು. ತಿನ್ನುವ ರುಚಿಕಟ್ಟಾದ ವಸ್ತುವೂ ಹೌದು. ಆದರೆ ಈ ಕತೆಯಲ್ಲಿ ಅದು ವಿಷ, ಕೈಗಾರಿಕೆಯ ಕಾರಣದಿಂದ ಜಮೀನು ಕಳೆದುಕೊಳ್ಳುವ ರೈತನ ಬದುಕಿಗೆ ಅದು ಸಂಕೇತ, ವ್ಯಂಗ್ಯ, ವಾಸ್ತವ ಎಲ್ಲವೂ ಆಗುತ್ತದೆ. ರೈತನ ಹಳಹಳಿಕೆ ಆತನ ಕುಟುಂಬಕ್ಕಿರುವುದಿಲ್ಲ. ಅದರಿಂದ ಬರುವ ಲಾಭದ ಕಡೆಗೆ ಉಳಿದವರ ದೃಷ್ಟಿ, ಮಗುವೊಂದು ಮೊಬೈಲನು. ಸಕ್ಕರೆ ಗೊಂಬೆಯಂತೆ ನೆಕ್ಕುವುದನ್ನು ಧ್ವನಿಸುವ ಈ ಕತೆಯ ಆಶಯ ಸುತ್ತಲ ಬದುಕಿಗೆ ಕತೆಗಾರರ ಸ್ಪಂದನವನ್ನು ಸ್ಪಷ್ಟಪಡಿಸುತ್ತದೆ. ಜಾಗತೀಕರಣದ ಅಪಾಯಗಳನ್ನು ಚಿತ್ರಿಸುವ ಈ ಕತೆ ರೈತನನ್ನು ಎಕ್ಕಾ ಏಳಿಸುವ ಭಿನ್ನ ತಂತ್ರಗಳು ಹೇಗಿರುತ್ತವೆಂಬುದನ್ನು ಇಲ್ಲಿ ಕಾಣಬಹುದಾಗಿದೆ” ಎಂದು ಹೇಳಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಕಾಕಾ, ಸಕ್ಕರೆ ಬೊಂಬೆ, ಮೋಚಿ ಹಾಗೂ ಧರ್ಮ, ಬಯಲು ಆಲಯದೊಳಗೋ, ನೀಲ್‌ ಆರ್ಮ್‌ಸ್ಟ್ರಾಂಗ್‌, ಸೋಲು, ಕೆಂಪು ಸೂರ್ಯ, ಅಸಲಿ ಬಣ್ಣ, ನಾನು, ಅವಳು ಮತ್ತು ಅದು, ಪತ್ರಗಳು ಹತ್ತು, ಮತ್ತೊಂದು, ಪಾರಿಪ್ಲವ, ಕತ್ತಲೆ, ಒಂದು ಬೆಂಕಿ-ಕಡ್ಡಿ!ಗೂಢ ಹಾಗೂ ಕುಸ್ತಿ ಸೇರಿ ಒಟ್ಟು 15 ಶೀರ್ಷಿಕೆಗಳಲ್ಲಿ ಕತೆಗಳಿವೆ.

About the Author

ರಾಮಚಂದ್ರ ಎಸ್.‌ ಕುಲಕರ್ಣಿ

ರಾಮಚಂದ್ರ ಎಸ್.‌ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಪಿಯುಸಿಯಲ್ಲಿ ʻಅತ್ಯುತ್ತಮ ವಿದ್ಯಾರ್ಥಿʼ ರೋಲಿಂಗ್‌ ಶೀಲ್ಡ್‌ ಪಡೆದು ಮುಂದೆ ಧಾರವಾಡ ಕ.ವಿ.ವಿ. ಯಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಬ್ಯಾಂಕ್‌ ಸೇವೆಯಲ್ಲಿದ್ದ ಇವರು ಸ್ವಯಂ ನಿವೃತ್ತಿ ಹೊಂದಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಕುಲಕರ್ಣಿ ಅವರು, ಹಲವಾರು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ಕಥಾಸಂಕಲನ, ಕವನ ಸಂಕಲನ, ಲಲಿತ ಪ್ರಬಂಧ, ವೈಚಾರಿಕ ಹಾಗೂ ವಿಮರ್ಶಾ ಲೇಖನಗಳು, ಹಾಗೂ ಮಿಡಿಗವನಗಳು ಸೇರಿವೆ. ಇವರ ʻಕಥೆಗಳಲ್ಲದ ಕಥೆಗಳುʼ ಸಂಕಲನಕ್ಕೆ ʻಅಪ್ಪʼ ಪ್ರಶಸ್ತಿ, ಮುಂಬೈನ ʻಗೋಕುಲವಾಣಿʼ ಯುಗಾದಿ ಕಥಾ ಸ್ಪರ್ಧೆಯಲ್ಲಿ ʻಸಕ್ಕರೆ ಬೊಂಬೆʼ ಕತೆಗೆ ಪ್ರಥಮ ...

READ MORE

Related Books