ಸುಧಾ ಚಿದಾನಂದ ಗೌಡ ಅವರ ‘ಬದುಕು ಪ್ರಿಯವಾಗುವ ಬಗೆ’ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರದ ವಿಶೇಷ ಘಟಕ ಯೋಜನೆಯಡಿಯಲ್ಲಿ ಧನ ಸಹಾಯ ಪಡೆದಿರುತ್ತದೆ. ಈ ಕೃತಿಯು 20 ಕತೆಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಕತೆಯು ಮೌಲ್ಯಯುತವಾಗಿದೆ. ಇಲ್ಲಿನ ಕಥೆಗಳು ಇಂದಿನ ವೇಗದ ಬದುಕಿಗೆ ಕನ್ನಡಿಯಾಗಿ ಹುಟ್ಟಿಕೊಂಡಿರಬಹುದು. ಅಂದರೆ ಹೇಳಬೇಕಾದ ಸಂಗತಿ, ಸಂವೇದನೆ, ಸಂಬಂಧಗಳ ವಿಶ್ಲೇಷಣೆಯನ್ನು ಆದಷ್ಟೂ ಕಡಿಮೆ ಮಾತುಗಳಲ್ಲಿ ಹೇಳುವ ಕಲೆಗಾರಿಕೆಯನ್ನು ಇಲ್ಲಿನ ಕಥೆ ಬೇಡುತ್ತದೆ. ಆದರೆ ಎಷ್ಟೋ ಬಾರಿ ಕಥೆಯ ಗಾತ್ರ ಕಾಪಾಡಿಕೊಳ್ಳುವುದೇ ಕಥೆ ಬರೆಯುವವರ ಜವಾಬ್ದಾರಿಯಾಗಿ ಬಿಡುವ ಅಪಾಯವಿದೆ ಎಂಬುವುದನ್ನು ಕೂಡ ವಿವರಿಸುತ್ತದೆ
ಸುಧಾ ಚಿದಾನಂದಗೌಡ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿಯವರು . ಕಾವ್ಯ, ಕಥಾ ಪ್ರಕಾರಗಳಲ್ಲಿ ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಿರುವ ಅವರು ಅವಧಿ, ಕೆಂಡಸಂಪಿಗೆ ಹಾಗೂ ಪ್ರಜಾವಾಣಿ ಪತ್ರಿಕೆಗಳಿಗೆ ಕವನ ಹಾಗೂ ಕೃತಿಯ ಕುರಿತ ವಿಮರ್ಶೆಗಳನ್ನು ಬರೆಯುತ್ತಾರೆ. ಕೃತಿಗಳು: ಬಯಲ ಧ್ಯಾನ, ಪ್ರಿಯಸಖೀ... ಪಾತರಗಿತ್ತೀ, ಬದುಕು ಪ್ರಿಯವಾಗುವ ಬಗೆ ...
READ MORE