ಲೇಖಕ ಕಾರ್ತಿಕಾದಿತ್ಯ ಬೊಳಗೋಡು ಅವರ ಕಥೆಗಳ ಸಂಕಲನ-ಕಾಡುಹಾದಿಯ ಜಾಡು ಹತ್ತಿ. ಕಾದಂಬರಿ, ಪ್ರಬಂಧಗಳನ್ನು ರಚಿಸಿರುವ ಲೇಖಕರು ಕಥೆಗಳನ್ನೂ ರಚಿಸಿದ್ದು, ವಿಷಯವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಕಾರ್ತಿಕಾದಿತ್ಯ ಬೆಳ್ಗೋಡು ಅವರು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕಿನ ಬೆಳ್ಗೋಡು ಗ್ರಾಮದವರು. ಮೂಡಿಗೆರೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಕೃಷಿಯಲ್ಲಿ ನಿರತರು. ಪರಿಸರ ಕುರಿತು ಜನಜಾಗೃತಿಯಲ್ಲಿ ತೊಡಗಿಸಿಕೊಂಡವರು. ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಪುಸ್ತಕ ಪ್ರಕಾಶನಕ್ಕೂ ಮುಂದಾಗಿ ತಮ್ಮದೇ ಆದ ಕೆಂಜಳಿಲು ಪ್ರಕಾಶನದ ಮೂಲಕ ತಮ್ಮ ಪುಸ್ತಕಗಳಲ್ಲದೇ ಇತರೆ ಸಮಾನ ಮನಸ್ಕ ಯುವ ಬರಹಗಾರರ ಪುಸ್ತಕಗಳನ್ನು ಹೊರತರಲು ಪ್ರೋತ್ಸಾಹ ನೀಡುತ್ತಿದ್ದಾರೆ. ಕೃತಿಗಳು: ಕಾಟಿಹರದ ತಿರುವು, ಕಾಡು ಹಾದಿಯ ಜಾಡು ಹತ್ತಿ, ನಾನೂ-ನೀವೂ ಜೊತೆಗೊಂದಿಷ್ಟು, ಪ್ಯಾರಾಸೈಟ್, ...
READ MORE