ಲೇಖಕ ವೈ.ಸತ್ಯನಾರಾಯಣ ಅವರ ಸಣ್ಣ ಕತೆಗಳ ಸಂಕಲನ ಕಲ್ಪವೃಕ್ಷದಲ್ಲಿ ವಿಷ ಬೀಜಗಳು. ಕವಿ, ಸಾಹಿತಿ ರಮಾನಂದ ಬನಾರಿ ಅವರು ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ , ಈ ಕತೆಗಳಲ್ಲಿನ ವಸ್ತುಗಳ ವೈವಿದ್ಯ ಮತ್ತು ಅವುಗಳನ್ನು ನಿರ್ವಹಿಸುವ ರೀತಿಯಲ್ಲೂ ವೈವಿದ್ಯತೆಯಿದೆ. ನಿತ್ಯ ಜೀವನದಲ್ಲಿ ನಾವು ಕಾಣುವ ಮತ್ತು ನಮ್ಮನ್ನು ಖಾಡುವ ಅನೇಕ ಸಮಸ್ಯೆಗಳ ಬಗೆಗೆ ಕತೆಗಾರ ಎಲ್ಲಾ ಎಕ್ಸ್ ರೇ ಕಿರಣಗಳನ್ನು ಹಾಯಿಸಿ ಬೇರೆ ಬೇರೆ ತರವಾದ ಚಿತ್ರಗಳನ್ನೂ ಕುತಹಲಕರವದ ತಿರುವುಗಳ ಮೂಲಕ ನೀಡಿದ್ದಾರೆ ಎಂಬುದಾಗಿ ಹೇಳಿದ್ದರೆ.
ವೈ.ಸತ್ಯನಾರಾಯಣ ಅವರ ತಾಯಿ ಪರಮೇಶ್ವರಿ, ತಂದೆ ವೈ.ಪರಮೇಶ್ವರ್. ಎಂ.ಎ, ಎಂ.ಎಡ್ ಪದವೀಧರರಾಗಿರುವ ಇವರು 1960ರಿಂದ 1968ರ ವರೆಗೆ ಕೆಳದರ್ಜೆ ಗುಮಾಸ್ತನಾಗಿ ಸೇವೆ ಸಲ್ಲಿಸಿದ್ದಾರೆ. 1968ರಿಂದ 1996ರ ವರೆಗೆ ಪ್ರೌಢಶಾಲಾ ಶಿಕ್ಷಕ, 1996ರಿಂದ 1999ರ ವರೆಗೆ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ. ಅನಂತರ ಅಲ್ಪ ಸಮಯ ಬಿ.ಎಡ್. ಕೇಂದ್ರದಲ್ಲಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ : 2002ರಲ್ಲಿ ನೌಕರಿಯಿಂದ ಸಂಪೂರ್ಣವಾಗಿ ನಿವೃತ್ತನಾದ ಮೇಲೆ ಸಾಹಿತ್ಯ ಕೃಷಿ ಆರಂಭಿಸಿ, ನಗೆ ಹನಿಗಳಿಂದ ಬರವಣಿಗೆ ಪ್ರಾರಂಭಿಸಿದರು. ಈವರೆಗೆ 11 ಕೃತಿಗಳನ್ನು ಬರೆದು ಪ್ರಕಟಿಸಿದ್ದರೆ ಮೊದಲನೆಯ ಕೃತಿ ಪುನರ್ ಮುದ್ರಣಗೊಂಡಿದೆ. 05-10-2019ರಂದು ‘ಹಾಸ್ಯ ತಪಸ್ವಿ’ ಎಂಬ ...
READ MORE