ಅಂತಾರಾಷ್ಟ್ರೀಯ ಪ್ರಸಿದ್ಧಿಯ ಸಮಾಜ ವಿಜ್ಞಾನಿ ಹಾಗೂ ಲೇಖಕ ಡಾ. ಹಿರೇಮಲ್ಲೂರು ಈಶ್ವರನ್ ಅವರು ಬರೆದಿರುವ ಸಣ್ಣ ಕಥೆಗಳ ಸಂಕಲನ-ರಾಜಾ ರಾಣಿ ದೇಖೋ.
ಪೋಸ್ಟ್ ಮನ್ ರಾಮಣ್ಣ, ರಾಜಾ ರಾಣಿ ದೇಖೋ, ನಿಂಗಪ್ಪ ಮಾಸ್ತರು, ಓಲೇಕಾರ ಬೋಲಾ, ಗುಳೇಕಾರ ಸತ್ಯಪ್ಪ, ವಿದ್ಯಾರ್ಥಿ ವೀರಣ್ಣ, ಜೀತಗಾರ ಮೂಕಾ ಹಾಗೂ ಕುಂಬಾರ ಮಲ್ಲಪ್ಪ ಹೀಗೆ 8 ಕಥೆಗಳಿವೆ. ಪ್ರೊ. ವಿ.ಕೃ. ಗೋಕಾಕ್ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಕಾರ್ಮಿಕರ ಗೋಳು, ಅವರನ್ನು ಸಂಜೀವಿನಿಯಾಗಿಸಬಲ್ಲ ಸಮತಾವಾದದ ಸಮರ್ಥನೆ ಕಥೆಗಳ ವಸ್ತುಗಳಾಗಿವೆ ಎಂದು ಪ್ರಶಂಸಿಸಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರು ಈಶ್ವರನ್, ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು ಗ್ರಾಮದವರು. ಲಿಂಗರಾಜ ಮಹಾವಿದ್ಯಾಲಯದಿಂದ ಎಂ.ಎ. ಪಡೆದ ನಂತರ ಕೆಲಕಾಲ ಸೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕ ರಾಗಿದ್ದರು. 'ಹರಿಹರ ಕವಿಯ ಕೃತಿಗಳು - ಒಂದು ಸಂಖ್ಯಾನಿರ್ಣಯ' ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಉನ್ನತ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಡಿ.ಲಿಟ್. ಪದವಿ ಪಡೆದರು. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ನಂತರ ಹಾಲೆಂಡ್ ನಲ್ಲಿ ನೆಲೆಸಿದರು. ಮನುಸ್ಕೃತಿ ಮತ್ತು ಪಾಶ್ಚಾತ್ಯ ಕುಟುಂಬ ಜೀವನ ಕುರಿತು ಸಂಶೋಧನೆ ನಡೆಸಿ ಇಂಗ್ಲಿಷ್ ನಲ್ಲಿ ಗ್ರಂಥ ಪ್ರಕಟಿಸಿದ್ದಾರೆ. ಅವರು ರಚಿಸಿದ 8 ಗ್ರಂಥಗಳ ಜೊತೆಗೆ 50ಕ್ಕೂ ಹೆಚ್ಚು ...
READ MORE