‘ಮುಳುಗಡೆ ಮತ್ತು ಇತರೆ ಕತೆಗಳು’ ಚನ್ನಪ್ಪ ಕಟ್ಟಿ ಅವರ ಮೊದಲನೆ ಕಥಾಸಂಕಲನವಾಗಿದೆ. ವಿಜಾಪುರದ ಹಿಂದುಳಿದ ಪ್ರದೇಶವಾದ ಸಿಂದಗಿಯಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಕಟ್ಟಿ ಅವರು ನವ್ಯದ ಸಂವೇದನೆಗೆ ಎದೆ ಒಡ್ಡಿ ಬೆಳೆದವರು. ಸಾಹಿತ್ಯಿಕವಾಗಿ ಶೋಷಣೆಯ ಜೀವಂತ ರೂಪಕದಂತೆ ಕಾಣುವ ವಿಜಾಪುರ ಜಿಲ್ಲೆ ಇಲ್ಲಿಯ ಎಲ್ಲ ಕತೆಗಳಿಗೂ ಕಥಾದ್ರವ್ಯ ಒದಗಿಸಿದೆ.
ಅಂಗೈಮುಳ್ಳಿನಂತೆ ಯಾತನೆಗೀಡುಮಾಡುವ ವರ್ತಮಾನದ ಹಲವಾರು ವಿದ್ಯಮಾನಗಳು ಇಲ್ಲಿಯ ಕತೆಗಳ ವಸ್ತುಗಳಾಗಿವೆ. ಸುತ್ತಲಿನ ಬದುಕನ್ನು ಸೂಕ್ಷ್ಮ ಸಂವೇದನೆಯಿಂದ ನೋಡುವ ಯುವ ಬರಹಗಾರನ ಶಕ್ತಿ ಹಾಗೂ ಹೊಯ್ದಾಟಗಳನ್ನು ಇಲ್ಲಿಯ ಬಹುತೇಕ ಕತೆಗಳಲ್ಲಿ ಕಾಣಬಹುದಾಗಿದೆ. ನಿರುದ್ದಿಶ್ಯ ರೊಮ್ಯಾಂಟಿಕ್ ಆದರ್ಶಗಳಲ್ಲಿ ತೇಲದೆ ಸಾಮಾಜಿಕ ವೈರುಧ್ಯಗಳತ್ತ ಗಮನಹರಿಸಿ ಬರೆದ ಇಲ್ಲಿನ ಕತೆಗಳು ನಮ್ಮೂರಿನ ಹಳ್ಳಿಯ ಸಂತೆಯಲ್ಲಿ ಮಾರಾಟಕ್ಕಿಟ್ಟ ಸಣ್ಣ ಸಣ್ಣ ಕನ್ನಡಿಗಳಂತೆ ಕಾಣಿಸುತ್ತವೆ. ಇಲ್ಲಿ ಕಾಣುವ ಸತ್ಯ ನಮ್ಮದು ಹಾಗೂ ನಮ್ಮ ಸುತ್ತಲಿನ ಪರಿಸದ್ದು ಎಂದು ಖಂಡಿತವಾಗಿಯೂ ಹೇಳಬಹುದು ಎನ್ನುತ್ತಾರೆ ಕಥೆಗಾರ ಎಸ್.ಎಫ್. ಯೋಗಪ್ಪ. ಮುಳುಗಡೆ ಮತ್ತು ಇತರೆ ಕತೆಗಳಲ್ಲಿ ಸಮಾಜಕ್ಕೆ ಸ್ಪಂದಿಸುವ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಕಥೆಗಳಿವೆ.
ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...
READ MORE