ಈ ಪುಸ್ತಕದಲ್ಲಿನ ಕತೆಗಳು ವೈವಿಧ್ಯಮಯ ವಸ್ತುವಿನಿಂದ ಕೂಡಿದ್ದು ಬದುಕಿನ ವಿವಿಧ ಮುಖಗಳಿಗೆ ಕನ್ನಡಿ ಹಿಡಿಯುತ್ತದೆ. ಪ್ರಾಣಿ ಪಕ್ಷಿಗಳೆಡೆಗೂ ಪ್ರೀತಿಯನ್ನು ಮೂಡಿಸುತ್ತವೆ. ಈ ಕತೆಗಳಲ್ಲಿ ಸಂತೋಷ, ದುಖಿ, ವಿಷಾದ, ಶೋಕ, ಬದುಕಿನ ಭರವಸೆ, ಹೊಸ ಪ್ರೇರಣೆ, ಮುಖವಾಡ, ಹುಂಬತನ ಮಾನವೀಯತೆ ಬದುಕಿಗಾಗಿನ ಹೋರಾಟ ಎಲ್ಲವೂ ಇದೆ. ಬಹುತೇಕ ಕತೆಗಳು ನಿಮ್ಮ ಮನಸನ್ನು ಕಲಕುವುದರಲ್ಲಿ, ಹೊಸ ಆಲೋಚನೆ ಮೂಡಿಸುವುದರಲ್ಲಿ ನನಗೆ ಸಂದೇಹವಿಲ್ಲ ಎನ್ನುತ್ತಾರೆ ಲೇಖಕ ನರೇಂದ್ರ ಎಸ್ ಗಂಗೊಳ್ಳಿ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯವರು. ತಂದೆ- ಹೆಚ್. ಸಂಜೀವ ದೇವಾಡಿಗ, ತಾಯಿ- ಪಾರ್ವತಿ ದೇವಾಡಿಗ. ಎಂ.ಕಾಂ. ಪದವೀಧರರು. ಸದ್ಯ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕನಾಗಿದ್ದಾರೆ. ಓದು, ಬರೆಹಗಳತ್ತ ಆಸಕ್ತಿ. ವೈಜ್ಞಾನಿಕ ಬರೆಹಗಳು ಸೇರಿದಂತೆ ವೈವಿಧ್ಯಮಯ ವಿಚಾರಗಳು ಕುರಿತಾಗಿ ಹಲವು ಲೇಖನಗಳನ್ನು ಬರೆದಿದ್ದು, ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಹೇಳದೆ ಹೋದ ಮಗಳಿಗೆ’ ಎಂಬ ಲೇಖನ ಸಂಕಲನ ಪ್ರಕಟಿಸಿದ್ದಾರೆ. ...
READ MORE