‘ಉಪ್ಪುಚ್ಚಿ ಮುಳ್ಳು ಮತ್ತಿತರ ಕಥೆಗಳು’ ಕೃತಿಯು ದಯಾ ಗಂಗನಘಟ್ಟ ಅವರ ಕಥಾಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ನಟರಾಜ್ ಬೂದಾಳು ಅವರು, ಈ ಸಂಕಲನದ ಕತೆಗಳನ್ನು ಓದಿದ ಮೇಲೆ ನಮ್ಮ ನೆಲದ ತಾಯಿಬೇರನ್ನು ಕಂಡು ಮಾತನಾಡಿಸಿಕೊಂಡು ಬಂದಿರುವ ಕತೆಗಾರ್ತಿಯ ಬಗೆಗೆ ಅಭಿಮಾನವೆನ್ನಿಸುತ್ತದೆ. ನಮ್ಮನ್ನು ಮೆತ್ತಿಕೊಂಡಿರುವ ಜಡತ್ವಕ್ಕೆ ಸಾಣೆ ಹಿಡಿದು ಚುರುಕುಮಾಡುವ ಔಷಧಿಯ ಗುಣ ಈ ಕತೆಗಳಿಗಿದೆ. ಒಂದು ಎಚ್ಚರದ ಸಾಂಸ್ಕೃತಿಕ ರಾಜಕಾರಣದ ಕಡೆಗೆ ಈ ಕತೆಗಳು ದುಡಿಯುತ್ತಿವೆ. ಬದುಕನ್ನು ಹೆಂಗಾರ ಮಾಡಿ ನೇರ್ಪು ಮಾಡಿಕೊಳ್ಳಲು ಹಂಬಲಿಸುವ ಹೆಣ್ಣು ಚೈತನ್ಯವನ್ನು ಕತೆಯ ಹೂರಣ ಮಾಡಿಕೊಳ್ಳುವುದರ ಮೂಲಕ ಪುರುಷಾಧಿಕಾರದ ನಿರಸನಕ್ಕೆ ತನ್ಮೂಲಕ ಲೋಕಸಹಜ ಬದುಕಿಗೆ ಹಂಬಿಸುತ್ತವೆ. ಪುಟ್ಟ ಪುಟ್ಟ ಮಾತುಗಳಲ್ಲಿ ಕತೆಯನ್ನು ಹೇಳುವ ಲಘುಧಾಟಿ ಓದುಗರನ್ನು ಆಯಾಸಗೊಳಿಸದೆ ಲವಲವಿಕೆಯಿಂದ ಇರುತ್ತದಡ. ಕತೆಗಳ ಜೊತೆಗೆ ಮಾತಾಡುತ್ತ ಮಾತಾಡುತ್ತ ಸಂಕಲನ ಮುಗಿದದ್ದೇ ಗೊತ್ತಾಗುವುದಿಲ್ಲ. ಈ ಕತೆಗಳು ಕತೆಗಾರ್ತಿಯಿಂದ ಬಂದಿಲ್ಲ ಅವರ ಮೂಲಕ ಬಂದಿವೆ.
ಕತೆಗಾರ್ತಿ ದಯಾ ಗಂಗನಘಟ್ಟ ಅವರು ಬೆಂಗಳೂರು ನಿವಾಸಿ. ವೃತ್ತಿಯಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಹವ್ಯಾಸಿ ಬರಹಗಾರ್ತಿ. ಪ್ರಶಸ್ತಿಗಳು: ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ( ಉಪ್ಪುಚ್ಚಿ ಮುಳ್ಳು) ಕೃತಿಗಳು: ಉಪ್ಪುಚ್ಚಿ ಮುಳ್ಳು ಮತ್ತಿತರ ಕಥೆಗಳು ...
READ MORE