ಗಾಂಧೀ ಬಜಾರ್

Author : ತಿರುಪತಿ ಭಂಗಿ

Pages 126

₹ 120.00




Published by: ಸಮರ್ಥ ಪ್ರಕಾಶನ,
Address: ಸಮರ್ಥ ಪ್ರಕಾಶನ, ಬಾಗಲಕೋಟ

Synopsys

ತಿರುಪತಿ ಭಂಗಿಯವರ ಬರಹ ಯುವ ಜನರನ್ನು ಆಕರ್ಷಿಸುತ್ತದೆ. 33 ವರ್ಷಕ್ಕೆ ಬರುವ ಮುನ್ನವೇ ಒಂದು ಕಾದಂಬರಿ, ಮೂರು - ಕವನ ಸಂಕಲನ, ಇದೀಗ ಮೂರನೇ ಕಥಾ ಸಂಕಲನ 'ಗಾಂಧೀ ಬಜಾರ್' ಅನ್ನು ನಮ್ಮ ಮುಂದಿಟ್ಟಿದ್ದಾರೆ.ಪಂದರಾ ಆಗಸ್ಟ್‌ನಲ್ಲಿ ಹಳ್ಳಿಯ ಶಾಲೆಯೊಂದರಲ್ಲಿ ಸ್ವಾತಂತ್ರ ದಿನಾಚರಣೆ ಆಚರಣೆಯ ಚಿತ್ರಣವಿದೆ.ಸುಮಾ ಟೀಚರ್ ಬೇಗನೇ ಶಾಲೆಗೆ ಬಂದು ಭಾರತದ ನಕ್ಷೆ ಬಿಡಿಸಿ, ಮಕ್ಕಳ ಜತೆ ಅದಕ್ಕೆ ಬಣ್ಣ ತುಂಬುತ್ತಾಳೆ. ಮತ್ತೊಂದು ಕಡೆ ತನ್ನ ಮಗನ ಅನಾರೋಗ್ಯದಿಂದಾಗಿ ಅಕ್ಕಂಡಪ್ಪ ಮೇಷ್ಟ್ರು ಶಾಲೆಗೆ ತಡವಾಗಿ ಹೋಗಿ ಶಿಕ್ಷೆಗೆ ಗುರಿಯಾಗುತ್ತಾನೆ. ಇಲ್ಲಿನ ಎರಡು ಮಾದರಿಗಳು ದೇಶಭಕ್ತಿ ಬಗೆಗಿನ ಸದ್ಯದ ಚರ್ಚೆಗೆ ಉತ್ತರ ಹೇಳುವಂತಿವೆ.

About the Author

ತಿರುಪತಿ ಭಂಗಿ

ಕತೆಗಾರ ತಿರುಪತಿ ಭಂಗಿ ಅವರು ಬಾಗಲಕೋಟೆ ಸಮೀಪದ ದೇವನಾಳ ಎಂಬ ಹಳ್ಳಿಯಲ್ಲಿ 1984 ರಲ್ಲಿ ಜನಿಸಿದರು. ತಂದೆ ಮಲ್ಲಪ್ಪ ತಾಯಿ ಗೌರವ್ವ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡರು. ಹೈಸ್ಕೂಲ್ ಶಿಕ್ಷಣ ಮಾಡುತ್ತಿರುವಾಗಲೇ ಅಜ್ಜ-ಅಜ್ಜಿಯರೂ ತೀರಿಕೊಂಡರು. ಸಾಹಿತ್ಯ ರಚನೆಗೆ ಇವರ ಬಡತನ, ಹಸಿವು, ಅವಮಾನಗಳೇ ಮೂಲ ದ್ರವ್ಯ. . ಬಾಗಲಕೋಟೆಯ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಹೃದಯರಾಗ, ಅವ್ವ, ಕವಳೆಗಣ್ಣಿನ ಹುಡುಗಿ, ಮನಸು ಕೊಟ್ಟವಳು, ಅಪ್ಪ’ ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಮೊದಲ ಕಾದಂಬರಿ ‘ಫೋಬಿಯಾ' 2017ರಲ್ಲಿ ಪ್ರಕಟಣೆ ಕಂಡಿತು. ಅವರ ‘ಜಾತಿ ಕುಲುಮ್ರಾಗ ಅರಳಿದ ಪ್ರೀತಿ’ ಚೊಚ್ಚಲ ಕೃತಿ ...

READ MORE

Related Books