‘ನಿರಂಜನ ಕೆಲವು ಸಣ್ಣ ಕತೆಗಳು’ ಕೃತಿಯು ಸಣ್ಣಕತೆಗಳ ಸಂಕಲನವಾಗಿದೆ. ಹಲವಾರು ಮಜಲುಗಳನ್ನು ದಾಟಿ ಬಂದಂತಹ ನಿರಂಜನರ ಸಾಹಿತ್ಯದಲ್ಲಿ ಓದುಗರು ಗಮನಿಸಬಹುದಾದ ಏಕಸೂತ್ರತೆ ಮಾನವೀಯ ಆದರ್ಶಗಳಿಗೆ ಸಂಬಂಧಿಸಿದಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸು.ರಂ. ಎಕ್ಕುಂಡಿ ಅವರು, ಬಾಡಿದ ನಗೆಯ ಹಿಂದಿನ ನೋವು, ಹಸಿದು ನಿದ್ದೆ ಹೋದವರ ನೋವು, ಕೊಯಿಲಿಗೆ ಕಾದಿರುವ ತೆನೆಗಳನ್ನು ತಬ್ಬುವ ಆಸೆ, ಬರಲಿರುವ ಮುಂಜಾವು ಇವೆಲ್ಲವೂ ನಿರಂಜರ ಸಾಹಿತ್ಯಸೃಷ್ಠಿಯ ಪ್ರೇರಣೆಗಳಾಗಿವೆ ಎಂದಿದ್ದಾರೆ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE