ಆಧುನಿಕ ಕೊಂಕಣಿ ಕತೆಗಳು

Author : ಗೀತಾ ಶೆಣೈ

Pages 170

₹ 200.00




Year of Publication: 2013
Published by: ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ
Address: ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು
Phone: 88242231877

Synopsys

ಹೆಸರೇ ಹೇಳುವಂತೆ ಈ ಕೃತಿಯು ಆಧುನಿಕ ಕೊಂಕಣಿ ಕತೆಗಳ ಸಂಕಲನವಾಗಿದೆ. 24 ಕೊಂಕಣಿ ಕತೆಗಳನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೊದಲ ಕತೆ ‘ನನ್ನ ಅಮ್ಮ ಎಲ್ಲಿಗೆ ಹೋದಳು’ ಕತೆಯ ಲೇಖಕರು ಶಣೈ ಗೋಂಯಬಾಬ. ಆಧುನಿಕ ಕೊಂಕಣಿ ಸಾಹಿತ್ಯದ ಕಣ್ವರೆಂದು, ನವೋದಯದ ಹರಿಕಾರರೆಂದೇ ಗೋಂಯಬಾಬ ಗುರುತಿಸಿಕೊಂಡಿದ್ದಾರೆ. ಅತ್ಯಂತ ಚುರುಕು ಬುದ್ಧಿಯ ಜಾಣ ಹೆಣ್ಣುಮಗಳೊಬ್ಬಳು ಎಳೆವಯಸ್ಸಿನಲ್ಲಿ ವಿಧವೆಯಾಗಿ, ಸಮಾಜದ ನಿರ್ಲಕ್ಷ್ಯಕ್ಕೆ ಗುರಿಯಾಗಿ, ಒಂಟಿಯಾಗಿ ಬಾಳಬೇಕಾದ ಪರಿಸ್ಥಿತಿಯಲ್ಲಿ, ಇನ್ನೂ ಅವಳಲ್ಲಿ ಜೀವಂತವಾಗಿ ಉಳಿದಿರುವ ಭಾವನೆಗಳನ್ನು, ಸಂವೇದನೆಗಳನ್ನು ಇಲ್ಲಿಯ ಕತೆಯಲ್ಲಿ ವಿವರಿಸಲಾಗಿದೆ.

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books