ಸುತ್ತಮುತ್ತಲಿನ ವಿದ್ಯಮಾನಗಳು-ಘಟನೆಗಳು ’ನೋಟದಾಗೆ ನಗೆಯಾ ಮೀಟಿ’ ಕಥಾ ಸಂಕಲನದ ವಸ್ತುಗಳು. ಒಟ್ಟು 10 ಕಥೆಗಳಿವೆ. ಪ್ರೀತಿ-ಪ್ರೇಮ-ಸಂಸಾರ ಹೀಗೆ ವಸ್ತು ವೈವಿಧ್ಯತೆ ಒಳಗೊಂಡಿದೆ.
ಯುವ ಬರಹಗಾರ ಸೋಮು ರೆಡ್ಡಿ ಮೂಲತಃ ಬಾಗಲಕೋಟೆ ಜಿಲ್ಲೆಯ ಕೇಸನೂರ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಎ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ನೇಮಕಾತಿ ಹೊಂದಿ ಹನ್ನೆರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಅಭಿನೇತ್ರಿ (ಕಾದಂಬರಿ), ನೋಟದಾಗ ನಗೆಯಾ ಮೀಟಿ (ಕಥಾ ಸಂಕಲನ), ತಲಾಷ್ (ನಾಟಕ) ಇವರ ಪ್ರಕಟಿತ ಕೃತಿಗಳಾಗಿವೆ. ಇವರಿಗೆ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿ, ಕ್ರಾಂತಿ ಪುರಸ್ಕಾರ, ಶ್ರೀ ಮಹಿಮಾ ಕೌಸ್ತುಭ ಪುರಸ್ಕಾರ, ಚೇತನ ಸಾಹಿತ್ಯ ಪುರಸ್ಕಾರ, ಜೇಂಟ್ಸ್ ...
READ MORE