ಲೇಖಕ ಬಿ. ಆರ್, ಸುಹಾಸ್ ಅವರ ಕೃತಿ ‘ದೃಷ್ಟಾಂತ ಕಥಾಮಂಜರಿ’.ಕೃತಿಯ ಕುರಿತು ಲೇಖಕರು ‘ಭಾರತೀಯರಾದ ನಾವು ಯಾವ ಮತ, ಪಂಥದಿಂದಲಾದರೂ ಸರಿ, ಉತ್ತಮ, ಉದಾತ್ತ ತತ್ವಗಳನ್ನು ವಿಶಾಲಹೃದಯದಿಂದ ಸ್ವಾಗತಿಸುತ್ತೇವೆ. ಹಂಸ ಕ್ಷೀರನ್ಯಾಯದಂತೆ, ಒಳ್ಳೆಯ ವಿಚಾರಗಳನ್ನು ಸ್ವೀಕರಿಸಿ ದೇಶ ಕಾಲಗಳಿಗೆ ಒಪ್ಪದ, ಜನರಿಗೆ ತೊಂದರೆಯಾಗುವ ಅಂಶಗಳನ್ನು ಬಿಡುತ್ತೇವೆ. ಹಾಗಾಗಿ, ಇಲ್ಲಿ ವಿವಿಧ ಮತಗಳ ದೃಷ್ಟಾಂತಕಥೆಗಳೂ ಇವೆ. ಬಹಳ ಚಿಕ್ಕದಾದ ಈ ಕಥೆಗಳನ್ನು ಓದಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಮನಸ್ಸಿಗೆ ಶಾಂತಿ, ವಿವೇಕ, ಮತ್ತು ಮುದವನ್ನು ಇವು ನೀಡುತ್ತವೆ. ಸಾಧ್ಯಾವಾದಷ್ಟು ಕಥೆಗಳ ನೀತಿಯನ್ನೂ ಕೊಟ್ಟಿದ್ದೇನೆ. ಅಂತೆಯೇ, ಅವುಗಳಿಗೆ ಪೂರಕವಾದ ಸುಭಾಷಿತಗಳನ್ನೂ, ಗಾದೆಗಳನ್ನೂ ಕೊಡಲು ಯತ್ನಿಸಿದ್ದೇನೆ.’ ಎಂದು ಹೇಳಿದ್ದಾರೆ.
ಬೆಂಗಳೂರಿನ ಎಂ.ಎಸ್.ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ ಪೂರೈಸಿದ ಡಾ. ಬಿ. ಆರ್ ಸುಹಾಸ್, 1976 ಜೂ. 26 ರಂದು ಬೆಂಗಳೂರಿನಲ್ಲಿ ಹುಟ್ಟಿದ್ದು. ಸದ್ಯ ನಂದಿನಿ ಲೇಔಟ್ ನಲ್ಲಿ ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿದ್ದಾರೆ. ಪ್ರವೃತ್ತಿಯಿಂದ ಬರಹಗಾರರು, ಗಾಯಕರು, ಛಾಯಾಚಿತ್ರಗ್ರಾಹಕರೂ ಆಗಿದ್ದಾರೆ. ಚರ್ಮದ ಕಾಯಿಲೆಗಳು, ಕಥಾಕೋಶ, ಆಯುರ್ವೇದ ಸಂಪೂರ್ಣ ಮಾರ್ಗದರ್ಶಿ, ಝೆನ್ ಕಥೆಗಳು, ಭಾರತದ ವನ್ಯಧಾಮಗಳು, ಚಾಣಕ್ಯ ನೀತಿ, ಕಿರಿಯ ಕಥಾ ಸರಿತ್ಸಾಗರ, ವಿಲಿಯಂ ಹಾರ್ವೆ, ಲೂಯಿಸ್ ಪಾಶ್ಚರ್ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ...
READ MORE