ಬದುಕು ಮಾಯೆಯ ಆಟ ಕೃತಿಯಲ್ಲಿ ಒಟ್ಟು ಹತ್ತು ಕಥೆಗಳಿವೆ. ಇಲ್ಲಿನ ಕಥೆಗಳು ಗಡಿನಾಡು ಪ್ರದೇಶದ ದುಗುಡ, ದುಮ್ಮಾನ, ತಲ್ಲಣಗಳನ್ನು ಹೇಳುತ್ತವೆ. ಈ ಪ್ರದೇಶದ ಜನಸಮುದಾಯ, ರಾಜಕೀಯ, ಸಮಾಜ ಜೀವನ, ಆರ್ಥಿಕತೆ, ಸಹಬಾಳ್ವೆ, ಹಿಂದುಳಿಯುವಿಕೆ, ಬಹುಭಾಷಿಕ ಪರಿಸರ, ಧಾರ್ಮಿಕ ಪರಿಪೇಕ್ಷ ಸೇರಿದಂತೆ ಇರುವ ಹಲವಾರು ಅಂಶಗಳನ್ನು ಕಥಾಹಂದರಕ್ಕೊಳಪಡಿಸಿ ಈ ನೆಲದ ಪ್ರತಿನಿಧಿಯಾಗಿರುವ ಪಾತ್ರಗಳಿಗೆ ಜೀವ ತುಂಬಿ ಕಟ್ಟಿಕೊಟ್ಟಿರುವ ಕಥೆಗಳಿವು. ಇಲ್ಲಿನ ವಾರಿ ಮತ್ತು ವಾಡೆ ಆಧುನಿಕತೆಯ ಸಮಸ್ಯೆಯ ಕುರಿತು ಗಂಭೀರವಾದ ಪ್ರಶ್ನೆ ಎತ್ತುತ್ತದೆ. ಈದ್ ಮತ್ತು ರಜಿಯಾ ಕಥೆ ಧಾರ್ಮಿಕತೆಯ ಕುರಿತು ಚರ್ಚಿಸುತ್ತದೆ. ಕದ್ದು ಓದಿದ ಪತ್ರಗಳು ಎಂಬ ಕಥೆ ಪ್ರೇಮ ಕಥೆಯಾಗಿದೆ. ಬದುಕು ಮಾಯೆಯ ಆಟ ಎಂಬ ಕಥೆಯು ವಿಧಿಯಾಟದ ಮುಂದೆ ಮನುಷ್ಯನ ಅಸಹಾಯಕತೆಗೆ ಕನ್ನಡಿ ಹಿಡಿಯುತ್ತದೆ. ನಾ ಹುಟ್ಟಿದಡೆ ಸಂಸಾರ ಹುಟ್ಟಿತ್ತು ನೋಡಾ ಎಂಬ ಕಥೆಯು ಮಹಿಳಾ ಸಂವೇದನೆಯ ಕಥೆ. ಹೀಗೆ ಇಲ್ಲಿನ ಎಲ್ಲ ಕಥೆಗಳು ವಿಭಿನ್ನ ವಿಷಯ ಹಾಗೂ ವಿಭಿನ್ನ ಪರೀವೇಷವನ್ನು ಹೊಂದಿವೆ. ಈ ಕೃತಿಯಲ್ಲಿ ಹಿರಿಯ ಕಥೆಗಾರರಾದ ಡಾ. ಅಮರೇಶ ನುಗಡೋಣಿಯವರ ಮುನ್ನುಡಿ ಇದೆ.
ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...
READ MOREಕಗ್ಗ ಕಥಾ ಬಹುಮಾನ 2012
ಸಂಯುಕ್ತ ಕರ್ನಾಟಕ ಕಥಾ ಬಹುಮಾನ 2012