ಕೃತಿಗೆ ಮುನ್ನುಡಿ ಬರೆದಿರುವ ಲೇಖಕ ಎಂ. ಎಸ್. ವೆಂಕಟರಾಮಯ್ಯ ಅವರು “ಈ ಕಥಾ ಸಂಕಲನದ ಕಥೆಗಳ ಭಾಷೆ ಧಾರವಾಡ ಸೀಮೆಯ ಸುತ್ತ ಮುತ್ತಲ ಹಳ್ಳಿಗಳ ಆಡುಭಾಷೆ. ಅದರ ಗಮ್ಮತ್ತನ್ನು ಹಾಗೆಯೇ ಉಣಬಡಿಸಿದ ವಿದ್ಯಾಧರ ಮುತಾಲಿಕ ದೇಸಾಯಿ ಅವರ ಶ್ರಮ, ಆಸ್ಥೆ ಇಲ್ಲಿನ ಕಥೆಗಳ ಸಾಲುಗಳಲ್ಲಿ ಹುದುಗಿದೆ. ನಂಬಿಕೆ-ಮೂಢನಂಬಿಕೆಗಳ ಜಂಜಾಟಗಳಿಂದ ಹೊರಬರುವ ಕಾಳಜಿಯನ್ನು ಪಾತ್ರಗಳಲ್ಲಿ ತುಂಬಿರುವುದು ಇದರ ವಿಶೇಷ -ಕನ್ನಡ ಕಥಾ ಲೋಕಕ್ಕೆ, ನೆಲದ ಗುಣ ಹಚ್ಚಿಕೊಂಡ ಸಂಗತಿಗಳ ಕಥೆಗಳನ್ನು ರಚಿಸಿ ಸಂಕಲನದಲ್ಲಿ ನೀಡಿರುವುದಕ್ಕೆ ವಿದ್ಯಾಧರ ಮುತಾಲಿಕ್ ದೇಸಾಯಿಯವರು ಅಭಿನಂದನಾರ್ಹರು. ಕ್ರಿಯಾಶೀಲ ದೇಸಾಯಿ ಅವರಿಂದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಬಹಳಷ್ಟು ಕೊಡುಗೆ ಈಗಾಗಲೇ ಸಂದಿದೆ” ಎಂದು ಕೃತಿ ಕುರಿತು ಪ್ರಶಂಸಿಸಿದ್ದಾರೆ.
ಸಾಹಿತಿ ವಿದ್ಯಾಧರ ಮುತಾಲಿಕ ದೇಸಾಯಿ ಅವರು ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಕೊಡಗನ ಕೋಳಿ ನುಂಗಿತ್ತಾ, ಸಂಕ್ರಮಣ, ಹೊಸಗಣ್ಣಿನ ಒಳನೋಟ, ದೊಳಗಿಂದ, ಚಕ್ರ, ಸಂಜೀವಿನಿ, ನಕ್ಷತ್ರಗಳು, ತೇರನ್ನೇರಿದ ಚೆನ್ನಿ, ದಾಸಾಮೃತವಾಣಿ ಒಳನೋಟ, ಉಡಿಯ ತುಂಬುವೆ, ದಾರ್ಶನಿಕ, ಮಹಾತಾಯಿ, ಹೊಳೆವ ಮುತ್ತಿನ ಹನಿಗಳು, ಮಹಾತಾಯಿ, ನುಡಿಸಿರಿ, ವೈವಿಧ್ಯ, ಹಿಮ್ಮುಖ ಹರಿದ ನದಿ ಸೇರಿ ಹಲವಾರು ಕೃತಿಗಳೂ ರಚಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು, ಗೊರೂರು ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ ಸೇರಿದಂತೆ ಸಂದಿವೆ. ...
READ MORE