‘ಬಾಳುಕುನ ಪುರಾಣ’ ಪ್ರಕಾಶ ಗ. ಖಾಡೆ ಅವರ ಕಥಾಸಂಕಲನವಾಗಿದೆ. ಕೆಲವು ಕತೆಗಳನ್ನು ನಾನು ಓದಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಓದುಗರ ಮುಂದಿಡುತ್ತಿರುವೆ. 'ಬಾಳುಕನ ಪುರಾಣ' ಎನ್ನುವ ಕಥೆಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಲಾಗಿದೆ. ಘಟನೆಯೊಂದು ತುಂಬ ಕುತೂಹಲಕರವಾಗಿ ಸಾಗುತ್ತ ಆಂಟಿ ಕೈಮಾಕ್ಸ್ ಸಾಧಿಸುವುದು ಈ ಕಥೆಯ ವೈಶಿಷ್ಠವಾಗಿದೆ. ಹಿಂದಿನ ಕಾಲವನ್ನು ಈಗಿನ ಕಾಲಕ್ಕೆ ಲೀಲಾಜಾಲವಾಗಿ ತರುವಲ್ಲಿ ನಿಫುಣರಾಗಿರುವ ಮತ್ತು ಪೌರಾಣಿಕ ಪ್ರಸಂಗಗಳನ್ನು ತುಂಬ ಸ್ವಾರಸ್ಯಕರವಾಗಿ ಪ್ರದರ್ಶನ ಮಾಡುವಲ್ಲಿ ಸೈ ಎನಿಸಿಕೊಂಡಿರುವ ಬಹುರೂಪಿ ತಂಡವೊಂದು ಬಾಳುಕಾನ ಬಂದು ತಮ್ಮ ಪ್ರದರ್ಶನ ತೋರಿಸುವ ಸಂದರ್ಭವೊಂದನ್ನು ಇಟ್ಟು, ಕಥೆಯನ್ನು ಪ್ರಕಾಶ ಖಾಡೆ ಅವರು ತಿಳಿ ಹಾಸ್ಯ ಹಾಗೂ ವಿರೋದವು, ಪ್ರಸಂಗಗಳೊಂದಿಗೆ ಚಿತ್ರಿಸಿರುವುದು ಎಲ್ಲರ ಗಮನ ಸೆಳೆಯುತ್ತದೆ. ಈ ಕತೆಯ ಏನೋ ರಹಸ್ಯವಿದೆಯೆಂದು ಅನಿಸಿದರೂ ಅದನ್ನು ಎಲ್ಲಿಯೂ ತೋರಗೊಡದೂರ, ಕತೆಯನ್ನು ನಿರ್ವಹಿಸಿರುವ ಕಥಾತಂತ್ರ ಮೆಚ್ಚುಗೆಯಾಗುತ್ತದೆ. ಕಳೆದು ಹೋಗಿರುವ, ಒಂದು ಕಾಲವನ್ನು ಅದರ ಎಲ್ಲ ಗುಣಾವಗುಣಗಳೊಂದಿಗೆ ಮುಂದಿರುವುದನ್ನುಇಲ್ಲಿ ಕಾಣಬಹುದಾಗಿದೆ.
ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...
READ MORE