ಮಾರ ಮಿಂದನು

Author : ಶ್ರೀಧರ ಬಳಗಾರ

Pages 160

₹ 200.00




Year of Publication: 2024
Published by: ಅಮೂಲ್ಯ ಪುಸ್ತಕ
Address: #83/1, 15ನೆಯ ಮುಖ್ಯರಸ್ತೆ, (ವಿಜಯನಗರ ಕ್ಲಬ್ ಎದುರುರಸ್ತೆ) ವಿಜಯನಗರ, ಬೆಂಗಳೂರು - 560040.
Phone: 9448676770 9620796770

Synopsys

‘ಮಾರ ಮಿಂದನು' ಶ್ರೀಧರ ಬಳಗಾರ ಅವರ ಕಥಾಸಂಕಲನವಾಗಿದೆ. ಬದುಕನ್ನು ಕುರಿತು ಯಾವುದೇ ಸರಳ ಸಾಮಾನ್ಯಕೃತ ಬೀಸು ಹೇಳಿಕೆಗಳನ್ನು ಮಾಡದೆ ವ್ಯಕ್ತಿವಿಶಿಷ್ಟ ಚಹರೆಗಳನ್ನುಳ್ಳ ತುಂಬು ಪಾತ್ರಗಳ ಮೂಲಕವೇ ಮನುಷ್ಯಲೋಕದ ಸಂಕೀರ್ಣತೆಗಳನ್ನು ಶೋಧಿಸುವುದು ಶ್ರೀಧರ ಬಳಗಾರ ಅವರ ಕತೆಗಳ ಹೆಚ್ಚಳವಾಗಿದೆ. 'ಮಾರ ಮಿಂದನು’ ಸಂಕಲನದಲ್ಲಿ ಬಳಗಾರರ ಪರಿಣತಿ ಪ್ರಬುದ್ಧತೆಗಳು ಹೊಸ ಎತ್ತರಗಳನ್ನು ಮುಟ್ಟಿವೆ. ಮನುಷ್ಯ ಸ್ವಭಾವ ಮತ್ತು ಸಂಬಂಧಗಳಲ್ಲಿನ ನಿಗೂಢತೆಗಳನ್ನು ಅನಾವರಣಗೊಳಿಸುವ ಪ್ರಕ್ರಿಯೆಯಲ್ಲಿಯೇ ಆಯಾ ಪಾತ್ರಗಳು ಜೀವಿಸುವ ಸಾಮಾಜಿಕ, ರಾಜಕೀಯ, ಆರ್ಥಿಕ ಸಂದರ್ಭಗಳಲ್ಲಿರುವ ಕಗ್ಗಂಟುಗಳನ್ನು ಕಾಣಿಸುವ ಮಹತ್ವಾಕಾಂಕ್ಷೆ ಈ ಕತೆಗಳಲ್ಲಿ ಎದ್ದುಕಾಣುವಂತಿದೆ. ಸುಲಭದ ಅವಸರದ ತೀರ್ಮಾನಗಳನ್ನು ಉಸುರದೆ ಎಲ್ಲರನ್ನೂ ಅವರು ಬಯಸದ ವಿಧಿಗಳ ಇಕ್ಕಟ್ಟುಗಳಲ್ಲಿಯೇ ಗಮನಿಸುವ ಮನುಷ್ಯ ಪ್ರೀತಿ ಇಲ್ಲಿ ಢಾಳಾಗಿ ಹರಿದಿದೆ. ಸಾಧಾರಣರೆಂದು ಮೇಲುನೋಟಕ್ಕೆ ಕಾಣುವ ವ್ಯಕ್ತಿಗಳ * ಅಸಾಧಾರಣತೆಯನ್ನು ಗುರುತಿಸುವ ಅಂತಃಕರಣ ಶ್ರೀಧರ ಬಳಗಾರರ ಕಥನದ ಪ್ರಧಾನ ಅಂಶವಾಗಿದೆ. ನಿರ್ದಿಷ್ಟ ಕಾಲ ದೇಶಗಳಲ್ಲಿ ಆಳವಾಗಿ ಬೇರುಬಿಟ್ಟಿದ್ದರೂ ಸಾರ್ವತ್ರಿಕದೆಡೆಗೆ ತುಡಿಯುವ ಈ ಕತೆಗಳು ಓದುಗರ ಮನಸ್ಸನ್ನು ಹಲವು ಬಗೆಗಳಲ್ಲಿ ತಟ್ಟುವಂತಿವೆ.

About the Author

ಶ್ರೀಧರ ಬಳಗಾರ

ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ  ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ  'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...

READ MORE

Related Books