ಕಥಾಗುಚ್ಛ

Author : ಪಿ.ಎಸ್. ರಾಮಾನುಜಂ

Pages 184

₹ 100.00




Year of Publication: 2010
Published by: ಹೇಮಂತ ಸಾಹಿತ್ಯ
Address: 972-ಸಿ, 4ನೇ ಇ ವಿಭಾಗ, 10-ಎ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560010
Phone: 23354619

Synopsys

‘ಕಥಾಗುಚ್ಛ’ ಲೇಖಕ ಪಿ.ಎಸ್. ರಾಮಾನುಜಂ ಅವರ ಸಣ್ಣಕಥೆಗಳ ಸಂಕಲನ.  ಮಾಸಪತ್ರಿಕೆ 'ಮಯೂರ'ದಲ್ಲಿ ಎರಡು ವರ್ಷ ಕಾಲ ಇಲ್ಲಿಯ ಕಥೆಗಳು ಪ್ರಕಟವಾಗಿವೆ. ರಾಮಾಯಾಣ, ಮಹಾಭಾರತಗಳ ಉಪಕಥೆಗಳು, ಪೌರಾಣಿಕ ಅಖ್ಯಾಯಿಕೆಗಳು, ಕಥಾಸರಿತ್ಸಾಗರದ ಕಥೆಗಳೂ ಹಾಗೂ ಐತಿಹ್ಯಗಳ ಆಧಾರದಿಂದ ಬರೆದ ಕಥೆಗಳು ಇಲ್ಲಿ ಸಂಕಲಿತವಾಗಿವೆ.

ಗುಣಾಢ್ಯ-ಕಾಣಭೂತಿ, ಭಾಮತೀ, ಸೋಮಪ್ರಭಾ-ಗುಹಚಂದ್ರ, ರುರು ಪ್ರಮದ್ವರಾ, ಶಲ,ದಲ, ವಾಮದೇವ, ರೈಭ್ಯ-ಯವಕ್ರೀತ, ಸತ್ಯವ್ರತ ಉತಥ್ಯ, ಅಗಸ್ತ್ಯರಿಂದ ದೃಢಸ್ಯುವಿನವರೆಗೆ, ಯಕ್ಷರಕ್ಷಿತ ಫಲಭೂತಿ, ನರವಾಹನದತ್ತನ್ನೂ ವೇಲಾಚಂದ್ರಸಾರರೂ, ವಂದಿವಿಜೇತ ಅಷ್ಟಾವಕ್ರ, ರೇವತಿ ನಕ್ಷತ್ರ, ವೈವಸ್ವತ ಮನು, ಕಣಾದ ಮಹರ್ಷಿಯ ಕೊನೆಯ ಕ್ಷಣಗಳು, ಚ್ಯವನ-ಸುಕನ್ಯೆ, ಅಕ್ಷೀಣಪುಣ್ಯ ಶಿಬಿರಾಜ, ಸೌಭರಿಯ ಭವ ವೈಭವ ಸೇರಿದಂತೆ 24 ಕಥೆಗಳಿವೆ.

ಪುರಾಣೀತಿಹಾಸಗಳು ಹಾಗೂ ಐತಿಹ್ಯಗಳಿಂದ ಆಯ್ದ ಈ ಅಖ್ಯಾಯಿಕೆಗಳು ಇಂದಿಗೂ ಪ್ರಸ್ತುತವಾಗಿವೆ. ಮಾನವ ಸ್ವಬಾವದ ಸೂಕ್ಷ್ಮಾತಿಸೂಕ್ಷ್ಮ ನೆಲೆಗಳು ಇಲ್ಲಿಯ ಕಥೆಗಳಲ್ಲಿ ಶೋಧನೆಗೆ ಒಳಗಾಗಿವೆ. ಮೂಲದ ಕಥಾ ಹಂದರವನ್ನು ಒಂದಿಷ್ಟೂ ಊನಗೊಳಿಸದೆ, ತಮ್ಮ ಕಲ್ಪನಾಲಹರಿಯನ್ನು ಹರಿಯಬಿಟ್ಟು ಸುಂದರ ಕಥಾ ಚಿತ್ರಗಳನ್ನಾಗಿ ರೂಪಿಸಿದ್ದಾರೆ ಡಾ. ಪಿ.ಎಸ್. ರಾಮಾನುಜಂ. ಕಥೆಗಳಲ್ಲಿ ಅತಿಮಾನುಷ ಘಟನೆಗಳು ತೀರಾ ಸಹಜವೆಂಬಂತೆ ಇಲ್ಲಿ ನಿರೂಪಿತವಾಗಿರುವುದು ಅವರ ಕಥೆಗಾರಿಕೆಗೆ ಸಾಕ್ಷಿಯಾಗಿದೆ.

About the Author

ಪಿ.ಎಸ್. ರಾಮಾನುಜಂ
(16 October 1941)

ಪಿ.ಎಸ್. ರಾಮಾನುಜಂ ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ IPS ಅಧಿಕಾರಿಗಳಾಗಿದ್ದು ಎಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲಿಸ್ (ADGP) ಆಗಿ ಕಾರ್ಯನಿರ್ವಹಿಸಿ 2001ರಲ್ಲಿ ನಿವೃತ್ತರಾದರು. ಸಾಹಿತ್ಯ, ಆಡಳಿತ ಎರಡನ್ನೂ ಸಮರ್ಥವಾಗಿ ನಿರ್ವಹಿಸಿದ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಬೇಡಮೂಡಲು ಗ್ರಾಮ. ತಂದೆ ಪ್ರತಿವಾದಿ ಭಯಂಕರ ಎಂದೇ ಬಿರುದಾಂಕಿತರಾಗಿದ್ದ ಸಂಪತ್ ಕುಮಾರ ಆಚಾರ್ಯ, ತಾಯಿ ಇಂದಿರಮ್ಮ. ಆರಂಭಿಕ ಶಿಕ್ಷಣ ಹರದನಹಳ್ಳಿ, ಚಾಮರಾಜನಗರದಲ್ಲಿ ಪೂರ್ಣಗೊಳಿಸಿದ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ(ಆನರ್ಸ್) ಪದವಿ ಪಡೆದರು,ಆನಂತರ ಕನ್ನಡ ಪಂಡಿತ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್, ಎಂ.ಎ ಪ್ರಥಮ ರ್ಯಾಂಕ್ ಸೇರಿದಂತೆ ಐದು ಚಿನ್ನದ ...

READ MORE

Related Books