ಪಿ. ನಾರಾಯಣ ನಾವಡ ತಮ್ಮ ಬಾಲ್ಯದಿಂದಲೂ ಕತೆ, ಕವಿತೆ, ನಾಟಕ, ಯಕ್ಷಗಾನಗಳಲ್ಲಿ ಆಸಕ್ತರಾಗಿದ್ದು, ಶಾಲೆಯಲ್ಲಿ ಓದುತ್ತಿರುವಾಗಲೇ ಕತೆಗಳನ್ನು ಬರೆದಿದ್ದರು. 1979ರಿಂದ ಸುಧಾ, ಮಯೂರ, ಮಲ್ಲಗೆ, ತುಷಾರ, ಉದಯವಾಣಿ, ವಿಜಯ ಕರ್ನಾಟಕ ಹಾಗೂ ಕರ್ಮವೀರ ಮುಂತಾದ ಪ್ರಮುಖ ಪತ್ರಿಕೆಗಳಲ್ಲಿ ಅವರ ಕತೆಗಳು ಪ್ರಕಟವಾಗಿದ್ದು, ಅದರ ಸಂಕಲನವೇ ’ಅಳಿದುಳಿದವರು’ ಈ ಸಂಕಲನದಲ್ಲಿ ಪಿ.ನಾರಾಯಣ ಅವರು ದಕ್ಷಿಣ ಕನ್ನಡದ ತಮ್ಮ ಬಾಲ್ಯದ ನೆನಪುಗಳು, ಬದುಕಿನ ಹೋರಾಟದ ತೀವ್ರ ಕ್ಷಣಗಳು ಹಾಗೂ ನಗರ ಜೀವನದ ಅವಲೋಕನವು ಸೃಷ್ಟಿಸಿರುವ ವಿಶಿಷ್ಟ ಪಾತ್ರಗಳು ಮತ್ತು ಆ ಪಾತ್ರಗಳ ಲೋಕವನ್ನು ತಮ್ಮ ಕತೆಗಳ ಮೂಲಕ ತೆರೆದಿಟ್ಟಿದ್ದಿದ್ದಾರೆ.