ಲೇಖಕ ಪಿ.ಬಿ ಪ್ರಸನ್ನ ಅವರು ಸಂಕೇತಗಳ ಹಂಗಿಲ್ಲದೇ ರಚಿಸಿರುವ ಕೃತಿ ’ಮಣ್ಣಿಂದ ಕಾಯ’.
ಕರಾವಳಿ ಜಿಲ್ಲೆಗಳಲ್ಲಿ ಸಾಗಿರುವ ನೆಲಗಳ್ಳತನ ಮತ್ತು ಕೋಮುವಾದೀ ಚಟುವಟಿಕೆಗಳು ಇವರ ಕೃತಿಯ ಪ್ರಮುಖ ವಸ್ತುಗಳಾಗಿವೆ. ದಕ್ಷಿಣ ಕನ್ನಡದ ಭಾಷಾ ಸಂಸ್ಕೃತಿಯನ್ನು ಮನ ಮುಟ್ಟುವಂತೆ ಬಳಸಿಕೊಂಡು ತಮ್ಮ ’ಮಣ್ಣಿಂದ ಕಾಯ’ ಕೃತಿಯಲ್ಲಿ ಬಿತ್ತರಿಸಿದ್ಧಾರೆ.
ಈ ಕಥಾ ಸಂಕಲನದಲ್ಲಿರುವ ಗಡಿ, ದಾನ, ನೆಲೆ, ರೂಪರಸ ಸ್ವರ್ಶ, ಗಾಂಧಿಯಂತೆ, ಮೊದಲಾದ ಕತೆಗಳು ಪ್ರಮುಖವಾಗಿವೆ.
ಮೂಲತಃ ಉಡುಪಿಯವರಾದ ಪಿ.ಬಿ. ಪ್ರಸನ್ನ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎರಡು ದಶಕಗಳಿಂದ ಕನ್ನಡ ಉಪನ್ಯಾಸಕರಾಗಿದ್ದಾರೆ. ಹೆಗ್ಗಡದೇವನ ಕೋಟೆ, ಶಿರಸಿ, ದಕ್ಷಿಣಕನ್ನಡ ಜಿಲ್ಲೆಯ ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಮೂಡಬಿದರೆಯ ನಿವಾಸಿ. 'ಡೀಸೆಂಟಾಗಿ ಬಯ್ಯುವುದು', 'ಸುಳ್ಳಿಗೆ ಜಯವೆನ್ನಿ' ಇವರ ಹಾಸ್ಯ ಲೇಖನಗಳ ಸಂಕಲನಗಳು. 'ಗಣಪ ಮತ್ತು ಗಾಂಪ', 'ಮಣ್ಣಿಂದ ಕಾಯ', “ತನುವಿನೊಳಗೆ ಹುಸಿತುಂಬಿ' ಕಥಾಸಂಕಲನಗಳು. 'ಮಂಚ ಮತ್ತು ಒಡಲು' ಕವನ ಸಂಗ್ರಹ. ...
READ MORE