ಅವಧೂತನೊಬ್ಬನ ರೂಪಾಂತರ

Author : ಡಿ.ವಿ. ಪ್ರಹ್ಲಾದ್

Pages 60

₹ 30.00




Year of Publication: 2001
Published by: ಸಂಚಯ ಪ್ರಕಾಶನ
Address: 100ನೇ ಮೊದಲ ಮೇನ್, 6ನೇ ಬ್ಲಾಕ್, 3ನೇ ಸ್ಟೇಜ್, 3ನೇ ಫೇಸ್, ಬನಶಂಕರಿ, ಬೆಂಗಳೂರು-560 085

Synopsys

`ಅವಧೂತನೊಬ್ಬನ ರೂಪಾಂತರ' ಕಥಾ ಸಂಕಲನ ಲೇಖಕ ಡಿ.ವಿ.ಪ್ರಹ್ಲಾದ್ ಅವರ ಬಹುಮಾನಿತ ಕಥೆಗಳ ಸಂಕಲನ. ಚಂದ್ರಶೇಖರ ಕಂಠಿ, ಎಸ್.ತಮ್ಮಾಜಿರಾವ್, ಸುಮಂಗಲಾ ಬಾದರದಿನ್ನಿ, ದಮಯಂತಿ ನರೇಗಲ್ ಮತ್ತು ಶ್ರೀವಿಜಯ ಬರೆದ ಕತೆಗಳು ಮನಸೆಳೆಯುವಂತಿವೆ. ಎಲ್ಲ ಕತೆಗಳ ಕುರಿತು ಕೇಶವ ಮಳಗಿಯವರು ಬರೆದ ಮಾತುಗಳನ್ನು ಇಲ್ಲಿ ಗಮನಿಸಬಹುದಾಗಿದೆ.‘ಈ ಕತೆಗಳು ವಿಭಿನ್ನವಾಗಿದ್ದು ಒಂದೇ ಸಂಕಲನದಲ್ಲಿ ಓದುವಾಗ ಏಕತಾನತೆಯ ಕಿರಿಕಿರಿಯಿಲ್ಲದೆ ಪ್ರತಿಯೊಂದು ಕತೆಯೂ ಹೊಸದೇ ಆದ ಲೋಕವೊಂದಕ್ಕೆ ಆಹ್ವಾನ ನೀಡುವಂತೆ ಆಕರ್ಷಿಸುತ್ತದೆ. ಎಲ್ಲ ಕತೆಗಳ ಆಪ್ತಧಾಟಿ ಕತೆಗಳು ಬಹುಕಾಲ ಮನದಲ್ಲಿ ಉಳಿಯುವಂತೆ ಮಾಡುತ್ತವೆ’ ಎಂದಿದ್ದಾರೆ..

 

About the Author

ಡಿ.ವಿ. ಪ್ರಹ್ಲಾದ್

ಕವಿ ಡಿ. ವಿ. ಪ್ರಹ್ಲಾದ್ ಅವರು ಮೂಲತಃ ಬೆಂಗಳೂರಿನವರು. 'ಡೀಮರ್', 'ನಾಳೆಯಿಂದ', 'ದಯಾ... ನೀ ಭವಾ... ನೀ' - ಪ್ರಕಟಿತ ಕವನ ಸಂಕಲನ. 'ಹೊಳೆದದ್ದು ತಾರೆ' - ಆಯ್ದ ಸಂಪಾದಕೀಯ. 'ಅನುದಿನವಿದ್ದು' - ಅಗಲಿದ ಲೇಖಕರ ನೆನಪುಗಳ ಸಂಗ್ರಹ. ‘ಎ. ಕೆ. ರಾಮಾನುಜನ್ ಹೆಜ್ಜೆಗುರುತು' ಸಹ ಸಂಪಾದಿತ ಕೃತಿ, 'ಬಗೆ ತೆರೆದ ಬಾನು'- ಸಾಹಿತಿಗಳ ಸಂದರ್ಶನ ಸಂಕಲನ, 'ಮುಕ್ತ ಛಂದ'- ಶಾಂತಿನಾಥ ದೇಸಾಯಿ ವ್ಯಕ್ತಿ ಕುರಿತ ಅನೇಕ ಕೃತಿಗಳನ್ನು ಸಂಪಾದಿಸಿದ್ಧಾರೆ. `ಸಂಚಯ’ ಸಾಹಿತ್ಯ ಪತ್ರಿಕೆಯ ನಿರಂತರ ಮೂರು ದಶಕಗಳಿಂದ ಸಂಪಾದಿಸಿ ಪ್ರಕಟಿಸುತ್ತಿದ್ದರು. ...

READ MORE

Related Books