"ನಿಧಿ" ಕೌಶಿಕ್ ರತ್ನ ಅವರು ಬರೆದಿರುವ ಸಣ್ಣ ಕಥೆಗಳ ಒಂದು ಕಥಾ ಸಂಕಲನ. ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಅಜ್ಜ ಅಜ್ಜಿಯರನ್ನು ಮಾತನಾಡಿಸಿ, ತಲತಲಾಂತರದಿಂದ ಅವರು ಕಥಾ ರೂಪದಲ್ಲಿ ಹೇಳುತ್ತಿದ್ದ ಜಾನಪದ ನೀತಿ ಕಥೆಗಳೆಲ್ಲವನ್ನು ಒಟ್ಟುಗೂಡಿಸಿ, ಅವುಗಳ ಆಧಾರದ ಮೇಲೆ ಈಗಿನ ಕಾಲಕ್ಕೆ ತಕ್ಕಂತೆ ಬದಲಾವಣೆ ತಂದು ಈ ಪುಸ್ತಕದಲ್ಲಿ ಬರೆಯಲಾಗಿದೆ. ಇಂದಿನ ಮೊಬೈಲ್ ಯುಗದಲ್ಲಿ ಇಂತಹ ಅಮೂಲ್ಯ ನಿಧಿಗಳು ಮಣ್ಣಲ್ಲೇ ಹುದುಗಿ ಹೋಗುತ್ತಿರುವುದರಿಂದ ಅವುಗಳನ್ನು ಆಚೆ ತೆಗೆದು ಪುಸ್ತಕ ರೂಪದಲ್ಲಿ ಕನ್ನಡಿಗರಿಗೆ ತಲುಪಿಸುವ ಮೂಲಕ ಅವು ಚಿರಕಾಲ ಉಳಿಯಲಿ ಎಂಬುದು ಲೇಖಕರ ಆಶಯ. ಸಾಧಿಸಿಯೇ ತೀರುತ್ತೇನೆ ಎಂಬ ಹುಚ್ಚು ಹಠ ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಈ ಪುಸ್ತಕವೇ ಸಾಕ್ಷಿ. ಮಕ್ಕಳು, ಗೃಹಿಣಿಯರು, ವೃದ್ಧರು, ವಯಸ್ಕರ ಹೀಗೆ ಯಾರು ಬೇಕಾದರೂ ಓದುವಂತಹ ಪುಸ್ತಕ ಇದು.
ನಟ, ನಿರ್ದೇಶಕ ಕೌಶಿಕ್ ರತ್ನ ಅವರು ಮೂಲತಃ ಸಕಲೇಶಪುರ ತಾಲೂಕಿನ ಹನಸೆ ಊರಿನವರು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಿಕಾಂ ಪದವೀಧರರಾದ ಇವರು ರಂಗಭೂಮಿ ಮತ್ತು ಸೀರಿಯಲ್, ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ ಬೆಂಗಳೂರಿನ ದೃಶ್ಯ ರಂಗ ತಂಡದಲ್ಲಿದ್ದುಕೊಂಡು ವಿವಿಧ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ನಂತರ ಕೆಲವು ಸೀರಿಯಲ್ಸ್, ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾ ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ. ಪ್ರಸ್ತುತ ರತ್ನ ಪಿಚ್ಚರ್ಸ್ ಎಂಬ ಸಂಸ್ಥೆ ಕಟ್ಟಿ "ಇಲ್ಲೀಗಲ್" ಹೆಸರಿನ ಸಿನಿಮಾ ಮಾಡುವ ಉದ್ದೇಶದಿಂದ ಕ್ರೌಡ್ ಫಂಡ್ ಮಾಡಲು "ನಿಧಿ" ಎಂಬ ಕಥಾ ಸಂಕಲನವನ್ನು ಬರೆದಿದ್ದಾರೆ. ...
READ MORE