ಹರಿಹರ ಕವಿಯ ರಗಳೆಯ ಕಥೆಗಳು

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 424

₹ 425.00




Year of Publication: 2023
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

‘ಹರಿಹರ ಕವಿಯ ರಗಳೆಯ ಕಥೆಗಳು’ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಕಥಾಸಂಕಲನವಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಹರಿಹರ ಕನ್ನಡದ ಗಣ್ಯಕವಿಗಳಲ್ಲಿ ಒಬ್ಬ. ಶರಣ ಚಳುವಳಿ ಮತ್ತು ವಚನಕ್ರಾಂತಿಯ ನಂತರ ಬಂದ ಗಮನಾರ್ಹ ಕವಿಗಳಲ್ಲಿ ಹರಿಹರ ಮತ್ತು ಅವನ ಸೋದರಳಿಯ ರಾಘವಾಂಕ ಮೊದಲಿಗರು, ರಾಜಾಶ್ರಯದ ಪಂಡಿತಮಾನ್ಯ ಪ್ರೌಢಕಾವ್ಯ ರಚನೆಗೆ ತಿಲಾಂಜಲಿ ನೀಡಿ, ಸ್ವತಂತ್ರವಾಗಿ, ಸರ್ವರನ್ನು ಆಕರ್ಷಿಸುವ ಕಾವ್ಯಗಳನ್ನು ರಚಿಸಿದರು. ಹರಿಹರನ ರಗಳೆಗಳು ಮತ್ತು ರಾಘವಾಂಕನ ಹರಿಶ್ಚಂದ್ರ ಕಾವ್ಯ, ಸಿದ್ಧರಾಮ ಚರಿತ್ರೆ ಮೊದಲಾದ ವಾದ್ಯಕ ಷಟ್ಟದಿಯ ಕೃತಿಗಳು ಕನ್ನಡ ದೇಸಿ ಛಂದಸ್ಸಿಗೆ ಕಾವ್ಯರೂಪ ನೀಡಿದವು. ಹರಿಹರ ಕಾವ್ಯ ಬರೆಯುವುದಿಲ್ಲ ಎಂಬ ವೀರ ಪ್ರತಿಜ್ಞೆ ಮಾಡಿ ಕೇವಲ ಶಿವ ಮತ್ತು ಶಿವಭಕ್ತರನ್ನು ಕೀರ್ತಿಸುವ ರಗಳೆಗಳನ್ನು ಬರೆದ. 'ಗಿರಿಜಾ ಕಲ್ಯಾಣ' ಎಂಬ ಪ್ರೌಢ ಚಂಪೂ ಕಾವ್ಯವನ್ನು ಬರೆದರೂ ಹರಿಹರ ರಗಳೆಯ ಕವಿ ಎಂದೇ ಪ್ರಸಿದ್ಧನಾಗಿದ್ದಾನೆ. ಅವನ ಅಪರಿಮಿತವಾದ ಭಕ್ತಿ ಪರವಶತೆ, ಸಾಟಿಯಿಲ್ಲದ ಶಬ್ದ ಭಂಡಾರ, ರಗಳೆಯ ಛಂದಸ್ಸಿನಲ್ಲಿ ಜಲಪಾತದಂತೆ ಧುಮ್ಮಿಕ್ಕಿದೆ.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books