ಪಾಟಕ್

Author : ದಯಾನಂದ ಸಾಲಿಯಾನ್

Pages 101

₹ 150.00




Published by: ಸುವರ್ಣಗಿರಿ ಪ್ರಕಾಶನ ಮಂಗಳೂರು

Synopsys

ಮುಂಬೈಯ ರಂಗಭೂಮಿಯ ಬಹುತೇಕ ಜನಪ್ರಿಯ ನಿರ್ದೇಶಕರು ಸಿದ್ಧ ಮಾದರಿಯನ್ನೇ ಬಳಸಿಕೊಂಡು ಹೆಸರು ಗಳಿಸುತ್ತಿರುವಾಗ, ದಯಾನಂದ ಸಾಲಿಯಾನ್ ಮುಂಬೈಯ ರಾತ್ರಿ ಶಾಲೆಯ ಹುಡುಗರನ್ನು ಜೊತೆ ಸೇರಿಸಿ, ಅನುಭವಿ ಗಳನ್ನು ದುಡಿಸಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದವರು. ತಮ್ಮದೇ ಒಂದು ಯುವ ಬಳಗವನ್ನು ಕಟ್ಟಿಕೊಂಡು ರಂಗಭೂಮಿ, ಸಾಹಿತ್ಯ ಲೋಕದಲ್ಲಿ ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಜನ್ಮಭೂಮಿ ಕರ್ಮಭೂಮಿಗಳ ನಡುವಿನ, ಭೂತ ವರ್ತಮಾನಗಳ ನಡುವಿನ ತೊಯ್ದಟಗಳಲ್ಲಿ ಒಡಮೂಡಿರುವ ಇಲ್ಲಿರುವ ಎಲ್ಲ ಕತೆಗಳ ಪಾತ್ರಗಳೂ ಅವರು ರಚಿಸಿ ನಿರ್ದೇಶಿಸಿರುವ ಹಲವು ನಾಟಕಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಲೆ ತೂರಿಸಿಕೊಂಡವುಗಳಾಗಿವೆ.  ಸುಮಾರು ಒಂಬತ್ತು ಕತೆಗಳನ್ನು ಒಳಗೊಂಡಿದೆ. ಇಲ್ಲಿರುವ ಕತೆಗಳಲ್ಲಿ ಬರುವ ಮರಾಠಿ,  ಹಿಂದಿ, ತುಳು ಪದಗಳು ಬರೀ ಭಾಷೆಯಾಗಿಯಷ್ಟೇ ಅಲ್ಲ ಬದುಕಾಗಿಯೂ ನಮ್ಮನ್ನು ಸುತ್ತಿಕೊಳ್ಳುತ್ತದೆ. ಈ ಮೂರೂ ಸಂಸ್ಕೃತಿಗಳು ಕತೆಗಾರನನ್ನು ಕಾಡಿರುವ ರೀತಿ, ಪ್ರತೀ ಪಾತ್ರಗಳ ನಮ್ಮನ್ನು ತಟ್ಟುತ್ತವೆ. ವರ್ತಮಾನದಲ್ಲಿ ಪಾಲಿಸುವ ಸಂಯಮದ ಮೂಲಕ ಭೂತವನ್ನು ಎದುರಿಸುತ್ತಾ ಭವಿಷ್ಯದ ನಿರೀಕ್ಷೆಯಲ್ಲಿರುವ ಸುಮಾ ಫಾಟಕ್ ಕತೆಯ ಪ್ರಮುಖ ನಾಯಕಿ. ಬದುಕನರಸಿದ ಕೈಗಳು ಎಂಬ ಕತೆಯಲ್ಲಿ ನಗರದ ಯುವಕರ ಅರಾಜಕ ಬದುಕನ್ನು ತೆರೆದಿಡುತ್ತದೆ.

Related Books