‘ಅಬ್ರಕಡಬ್ರ’ ಮಿರ್ಜಾ ಬಷೀರ್ ಅವರ ಕಥಾ ಸಂಕಲನವಾಗಿದೆ. ಇದು ನನ್ನ ನಾಲ್ಕನೆಯ ಕಥಾಸಂಕಲನ. ಓದುಗರು ಈ ಕಥೆಗಳನ್ನು ಎಂದಿನಂತೆ ಸ್ವೀಕರಿಸುತ್ತಾರೆಂಬ ವಿಶ್ವಾಸ ನನ್ನದು. ಓದುಗರಿಲ್ಲದೆ ಬರಹಗಾರನಿಲ್ಲ. ಸಮಾಜದಲ್ಲಿ ಬೇರು ಬಿಟ್ಟ ಬರಹಗಾರ ಮಾತ್ರ ಬದುಕ ಹೀರಿ ಬರೆಯಬಲ್ಲ. ಸಮಾಜಕ್ಕೆ ವಿಮುಖನಾದವ ಅಪ್ರಸ್ತುತನಾಗುತ್ತಾನೆ. ನಮ್ಮ ಇಂದಿನ ಬದುಕನ್ನು ನೋಡಿದರೆ ಜೀವ ತಲ್ಲಣಿಸಿ ಹೋಗುತ್ತದೆ. ಸಮಾಧಾನವೆಂದರೆ ಸಾಂತ್ವನವೂ ಇಲ್ಲೇ ಇರುವುದು. ಕಥೆಯೆಂದರೆ ಬದುಕನ್ನು ನೋಡುವ ಬಗೆ. ಸುಧಾರಿಸುವ ಬಗೆ. ಕಥೆ ಕನ್ನಡಿಯಷ್ಟೇ ಅಲ್ಲ ಓರೆಕೋರೆಗಳನ್ನು ತಿದ್ದುವ ಚಿಕಿತ್ಸೆಯನ್ನೂ ಒಳಗೊಂಡಿರುತ್ತದೆ. ದುರಿತ ಕಾಲದ ಸಾಹಿತ್ಯಕ್ಕೆ ಜವಾಬ್ದಾರಿ ಹೆಚ್ಚು ಎನ್ನುತ್ತಾರೆ ಲೇಖಕ ಮಿರ್ಜಾ ಬಷೀರ್.
ಲೇಖಕ ಡಾ. ಮಿರ್ಜಾ ಬಷೀರ್ ಅವರು ತುಮಕೂರು ನಿವಾಸಿ. ‘ಬಟ್ಟೆಯಿಲ್ಲದ ಊರಿನಲ್ಲಿ’, ‘ಜಿನ್ನಿ’, ‘ಹಾರುವ ಹಕ್ಕಿ ಮತ್ತು ಇರುವೆ’ ಪ್ರಕಟಿತ ಕತಾಸಂಕಲನಗಳು. ಅನೇಕ ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೂರು ಬಾರಿ ಪ್ರಜಾವಾಣಿ ದೀಪಾವಳಿ ಕತಾ ಸ್ಪರ್ಧೆ ಹಾಗೂ ಒಂದು ಬಾರಿ ಕನ್ನಡಪ್ರಭ ಸಂಕ್ರಾಂತಿ ಕತಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇವರ ಕೆಲವು ಕತೆಗಳು ಪದವಿ ತರಗತಿಗಳ ಪಠ್ಯಗಳಾಗಿವೆ. ಒಂದು ಕತೆಯು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ 9ನೇ ತರಗತಿಯ ಭಾಷಾ ಅಲ್ಪಸಂಖ್ಯಾತ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ನಾಟಕ ‘ತಬ್ಬಲಿಗಳು’ ಕೃಷಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ...
READ MORE