ಲೇಖಕ ಎಂ.ವಿ. ಶಶಿಭೂಷಣ ರಾಜು ಅವರ ಕಥಾ ಸಂಕಲನ ಕತ್ತಲಲ್ಲಿ ಕರಗಿದವರು. "ಕತ್ತಲಲ್ಲಿ ಕರಗಿದವರು" ಕಥಾ ಸಂಕಲನದಲ್ಲಿ ಹದಿನೈದು ವಿಭಿನ್ನ ಕಥೆಗಳಿವೆ. ಕತ್ತಲಲ್ಲಿ ಕರಗಿದವರು ಕಥೆಯಲ್ಲಿ, ಪಟ್ಟಣದಲ್ಲಿ ಹೆಚ್ಚು ಹಣ ಗಳಿಸಬಹದು ಎಂಬ ಆಸೆಯಿಂದ ಹಳ್ಳಿ ಬಿಟ್ಟು ಹೊರಡುವ ದಂಪತಿಗೆ, ಕೊರೋನ ಕಾಡಿ ಜೀವನವನ್ನು ನರಕ ಸದೃಶ್ಯ ಮಾಡುವ ದೃಶ್ಯಗಳಿವೆ. ಹೇಗೆ ಉಳ್ಳವರಿಗೆ ಎಲ್ಲವೂ ಸಿಗುತ್ತದೆ, ಬಡವರಿಗೆ ಯಾವ ಆಶ್ರಯವೂ ಇರುವುದಿಲ್ಲ ಎಂದು ಮಾರ್ಮಿಕವಾಗಿ ಹೇಳುವ ಕಥೆಯಿದೆ. ಅನೂಹ್ಯ ರೀತಿಯಲ್ಲಿ ಕಥೆ ಮುಗಿಯುತ್ತದೆ. ಇಂತಹ ಮುಕ್ತಾಯ ಯಾವ ಕಥೆಯಲ್ಲೂ ಹಿಂದೆ ಬಂದಿಲ್ಲ ಅನಿಸುತ್ತದೆ, ಅದನ್ನು ಕಥೆಯನ್ನು ಓದಿಯೇ ತಿಳಿಯಬೇಕು .
ಎಂ.ವಿ.ಸಿದ್ದರಾಮ ರಾಜು ಅವರು ಮುನ್ನುಡಿಯಲ್ಲಿ ಹೇಳಿರುವಂತೆ, ಕಥೆಯನ್ನು ಹೇಳುವ ಕಲೆ ಕಥೆಗಾರರಿಗೆ ಚನ್ನಾಗಿ ಸಿದ್ದಿಸಿದೆ. ಭಾಷೆಯಲ್ಲಿ ಒಳ್ಳೆಯ ಹಿಡಿತವಿದೆ. ಅನಾವಶ್ಯಕವಾಗಿ ಯಾವುದೇ ಸನ್ನಿವೇಶಗಳನ್ನು ಸೃಷ್ಟಿಸದೆ, ಯಾವುದೇ ಸಂಭಾಷಣೆಯನ್ನು ಹೆಚ್ಚು ಎಳೆಯದೇ ಕಥೆಗಳನ್ನು ಹೆಣಿದಿದ್ದಾರೆ. ಕಥೆಗಳ ತುಂಬಾ ಜೀವನ ತತ್ವ, ಜೀವನ ಚಿಂತನೆ, ಜೀವನದ ದ್ವಂದ್ವಗಳು, ಗೊಂದಲಗಳು, ಗ್ರಹಿಕೆಗಳು, ಕಲ್ಪನೆಗಳು, ಭ್ರಮೆಗಳು ಮತ್ತು ಸಾವಿನಬಗ್ಗೆ ಚಿಂತನೆಗಳಿವೆ. ಕಥೆಗಳು ಓದಿ ಮುಗಿಸಿದ ಮೇಲೆ ಸ್ವಲ್ಪ ಹೆಚ್ಚೇ ಕಾಡುತ್ತವೆ.
ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ. ಕೃತಿಗಳು: ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್, ...
READ MORE