ಲೇಖಕಿ ಮೇಘನಾ ಸುಧೀಂದ್ರ ಅವರ ಕೃತಿ- # AI ಕಥೆಗಳು. AI ಎಂದರೆ ಕೃತಕ ಬುದ್ದಿಮತ್ತೆ (Artificial Intelligence). ಈ ಕೃತಿಯು 14 ಶೀರ್ಷಿಕೆಗಳನ್ನು ಒಳಗೊಂಡಿದೆ. ಪ್ರೀತಿ ಗೀತಿ ಮತ್ತು ಸುಲಕ್ಷಾ, ಮಧುಕರ ವೃತ್ತಿ ಎನ್ನದು, ಏನೆಂದು ಹೆಸರಿಡಲಿ, ನಾವಿಕನಿಲ್ಲದ ದೋಣಿ, ಯೂ ಟರ್ನ್, ಅನಾಮಿಕತೆಯ ಮುಖ, ಕಾಡಿನ ಮಾತು,ದೇವರು, ನರ ರೂಪ, ಮೋಡ ಕವಿದ ವಾತಾವರಣ, ವಿಧಿ ಬರಹ, ಸೇಡಿನ ಮತಬೇಟೆ, ಆರ್ಕೆಸ್ತ್ರಾ ತಾಯಪ್ಪನಹಳ್ಳಿ ಪುರಾಣ ಕಥಾನಕಗಳು ಇಲ್ಲಿವೆ. ಆಧುನಿಕ ತಂತ್ರಜ್ಞಾನದ ಭರಾಟೆ ಹಿನ್ನೆಲೆಯಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ ಹೆಚ್ಚುತ್ತಿದೆ. ಮನುಷ್ಯ ತನ್ನ ಕೆಲಸದ ಭಾರ ಕಡಿಮೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಪರಿಕಲ್ಪನೆಯ ಕಥೆಗಳು ಕೇವಲ ಭಾವಪ್ರಧಾನ ವಾಗದೇ ತಂತ್ರಜ್ಞಾನದ ಬಳಕೆಯ ಅಂಶಗಳೂ ಸಹ ಕಥೆಗಳಲ್ಲಿ ಪ್ರಧಾನ ಪಾತ್ರ ಪಡೆಯುತ್ತಿವೆ. ಇಂತಹ ಸಂಗತಿಗಳನ್ನು ಒಳಗೊಂಡ ಕಥೆಗಳು ಇಲ್ಲಿ ಸಂಕಲನಗೊಂಡಿವೆ.
ಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘಾನರವರು ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ ಏ ಐ(ಕೃತಕ ಬುದ್ಢಿಮತ್ತೆ) ಗುಂಪಿನ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು. ಜಯನಗರದ ಹುಡುಗಿ, ಲಿಪಿಯ ಪತ್ರಗಳು #AI ಕಥೆಗಳು,ಬೆಂಗಳೂರು ಕಲರ್ಸ್ , ಪ್ರೀತಿ ಗೀತಿ ಇತ್ಯಾದಿ ಇವರ ಪ್ರಕಟಿತ ಪುಸ್ತಕಗಳು. ಕನ್ನಡಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹೊಸ ಪೀಳಿಗೆಯ ಕಥೆಗಳು ಬರೆಯುವುದು ...
READ MORE