ಯುವ ಲೇಖಕರಾದ ಶ್ರೀರಂಗ ಪುರಾಣಿಕ್ ಅವರ ' ಕೃಷ್ಣಾ ತೀರದ ಕನಸುಗಳು' ಕಥಾ ಸಂಕಲನ ಅನುಭವಗಳನ್ನು , ಕಂಡುಂಡ ನೋವು- ನಲಿವುಗಳನ್ನು ಕಾಲ್ಪನಿಕವಾಗಿ ಜನರಿಗೆ ಸಾಹಿತ್ಯ ರೂಪದಲ್ಲಿ ತಮ್ಮ ಬರಹಗಳ ಮೂಲಕ ನೀಡಿದ್ದಾರೆ.
ಇವರು ಬರೆದ ಕಥಗಳು ಕೃಷ್ಣಾ ತೀರದ ಜನರ ಸಮಸ್ಯೆಗಳನ್ನು ಕುರಿತಾದದ್ದು, ಹಲವು ಕಥೆಗಳು ಸಮಾಜದಲ್ಲಿ ವಿವಿಧ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸುವಲ್ಲಿ ಯಶಸ್ವಿಯಾಗಿವೆ. ಪ್ರಸ್ತುತ ಸನ್ನಿವೇಶದಲ್ಲಿ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ಕೂಡ ಕಥೆಗಳು ಜನ-ಮನ ಪಳೆಯುವಷ್ಟು ಪರಿಪಕ್ವತೆಯನ್ನು ಹೊಂದಿವೆ.
ಕಥಾ ಸಂಕಲನದಲ್ಲಿ ಬರುವ ಸನ್ನಿವೇಶಗಳು ಮತ್ತು ಆ ಸಮಯದಲ್ಲಿ ಅವರು ಉಪಯೋಗಿಸಿದ ಭಾಷೆಯು ಗ್ರಾಮೀಣ ಪರಿಸರವನ್ನು ನೆನಪಿಸುತ್ತದೆ. ಹಲವು ಕಡೆ ಅವರು ನಗರ ಪದೇಶ ಜನರ ಜೀವನವನ್ನು ಕೂಡ ಅಷ್ಟೇ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. ಕೃಷಿ ಅವಲಂಬಿತರ ಜೀವನ, ಸರ್ಕಾರಿ ನೌಕರರ ಜೀವನ, ಯೋಧರ ಪರಿವಾರ ಮತ್ತು ಸಮಸ್ಯೆ, ಜೊತೆಗೆ ಇಂದು ಬಹಳಷ್ಟು ಕುಟುಂಬಗಳು ಎದುರಿಸುತ್ತಿರುವ ವಿದೇಶಿ ವಲಸಿಗರ ಬಗ್ಗೆಯೂ ಅವರು ಕಥೆಗಳಲ್ಲಿ ವಿವರಿಸಿದ್ದುಆಕರ್ಷಕ ವಿಷಯ ವಸ್ತುಗಳ ಮೂಲಕ ಕಥಾಲೋಕವನ್ನು ತೆರೆದಿದ್ಧಾರೆ.
ಶ್ರೀರಂಗ ಪುರಾಣಿಕ್ ಅವರು ವಿಜಯಪುರದವರು. ರಾಜ್ಯಶಾಸ್ತ್ರ ವಿಷಯದಲ್ಲಿ M.A ಸ್ನಾತಕೋತ್ತರ ಪದವಿಯನ್ನು ರಾಣಿಚನ್ನಮ್ಮ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಸಾಹಿತ್ಯ, ರಂಗಭೂಮಿ,ಕಿರುಚಿತ್ರ, ಆಧ್ಯಾತ್ಮ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡದ ದಿನಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಪ್ರಜಾವಾಣಿ, ವಿಜಯವಾಣಿ, ವಿಶ್ವವಾಣಿ, ಕನ್ನಡ ಪ್ರಭ, ಉದಯವಾಣಿ, ಪತ್ರಿಕೆಗಳಲ್ಲಿ ಲೇಖನ,ಕವನ ,ಹನಿಗವನ, ಚುಟುಕು, ಸಣ್ಣ ಕಥೆಗಳು ಮುಂತಾದವುಗಳು ಪ್ರಕಟಣೆಯಾಗಿವೆ. ಜೊತೆಗೆ ವಾರ ಪತ್ರಿಕೆ , ಮಾಸ ಪತ್ರಿಕೆಗಳಾದ ಕರ್ಮವೀರ, ತರಂಗ, ಮಾನಸ, ವಿಕ್ರಮ, ನಯನ, ಮುಂತಾದ ನಿಯತಕಾಲಿಕೆಗಳಲ್ಲೂ ಪ್ರಕಟಗೊಂಡಿದೆ. ಹನಿಹನಿ ಇಬ್ಬನಿಯ , ಮಾನಸ, ಸಮರ್ಥ ಸಾಹಿತ್ಯ ಬಳಗ, ವೀರೇಶ್ವರ ವೇದಿಕೆ , ಕನ್ನಡ ಕಸ್ತೂರಿ ...
READ MORE