‘ಮನವು ಅರಳಲಿ’ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೆಲವು ಕಥೆಗಳ ಸಂಗ್ರಹದ ಈ ಕಿರುಪುಸ್ತಕವನ್ನು ತಮ್ಮ ಕೈಗಿಡಲು ಬಹಳವೇ ಸಂತಸವಾಗುತ್ತಿದೆ. ಈ ಸಂದರ್ಭದಲ್ಲಿ ವಿಷಯವೊಂದನ್ನು ವಿವರಿಸಿ, ಮನಸ್ಸಿಗೆ ನಾಟುವಂತಹ ಬರಹಗಳನ್ನು ನಾನು ಬರೆಯಬಲ್ಲೆನೆಂಬ ವಿಶ್ವಾಸವನ್ನು ಮೊದಲು ಹುಟ್ಟಿಸಿದ್ದು ವಿಜಯವಾಣಿಯ ಪ್ರಧಾನ ಸಂಪಾದಕರಾಗಿದ್ದ ಶ್ರೀ ಹರಿಪ್ರಕಾಶ ಕೋಣೆಮನೆಯವರು. ವಿಜಯವಾಣಿ ದಿನಪತ್ರಿಕೆಯಲ್ಲಿ ಮನೋಲ್ಲಾಸ ಎಂಬ ಅಂಕಣವನ್ನು ಅವರು ಪರಿಚಯಿಸದೇ ಇದ್ದರೆ ಬಹುಶಃ ಇಂದು ಈ ಕೃತಿ ಹೊರಬರುತ್ತಿರಲಿಲ್ಲ. ಅಂದು ಅವರು ಹೇಳಿದ ಮಾತುಗಳೇ ಇಂದು ನನ್ನನ್ನೊಬ್ಬ ಬರಹಗಾರನನ್ನಾಗಿ ಮಾಡಿರುವುದರಲ್ಲಿ ಅತಿಶಯೋಕ್ತಿಯಿಲ್ಲ ಎನ್ನುವುದು ಲೇಖಕರ ಮಾತಾಗಿದೆ.
ಗಣಪತಿ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಾರ್ಸಿಕಟ್ಟಾದವರು. ಪ್ರಸ್ತುತ್ತ ದಾಂಡೇಲಿಯವರು. ತಂದೆ ಕೃಷ್ಣಪ್ಪ ಹೆಗಡೆ ,ತಾಯಿ ಕಮಲಾಕ್ಷಿ ಹೆಗಡೆ . ಎಮ್ ಎ ಕನ್ನಡ, ಎಮ್ ಎ ಎಕಾನಾಮಿಕ್ಸ್ , ಬಿ ಎಡ್ ಪದವಿಯನ್ನು ಹೊಂದಿದ್ದಾರೆ. ಕೃತಿಗಳು: ನೆಲೆಸಿರೋದು ದಾಂಡೇಲಿ, ಮರಳಿನ ಮನೆ ,ವಿಜಯ್ ಕೃತಿ ಸ್ಪಂದನ ,ಮೌನಸೆರೆ, ಕಾರ್ಮುಗಿಲು, ಕಡಲಂಚಿನ ಅಲೆಗಳು ...
READ MORE