‘ಕನಸುಗಳು ಖಾಸಗಿ’ ಲೇಖಕ ನರೇಂದ್ರ ಪೈ ಅವರ ಕತಾಸಂಕಲನ. ಇಲ್ಲಿನ ಕತೆಗಳಲ್ಲಿ ವಿಸ್ತಾರವಿದೆ, ಆಳವಿದೆ, ಒಂದು ಬಗೆಯ ನಿಗೂಢತೆಗಳಿವೆ. ಅಸ್ಪಷ್ಟತೆಯಲ್ಲೇ ಸಾಗುವ ಕತೆಗಳು ಓದುಗರ ಒಳಗೆ ಸ್ಪಷ್ಟವಾಗುತ್ತಾ ಹೋಗುವ ವಿಭಿನ್ನತೆಗಳಿವೆ. ಇವರ ಕತೆಗಳಲ್ಲಿ ಕತೆಯ ಸಾರವನ್ನು ಬಿಚ್ಚಿಡುವುದಿಲ್ಲ, ಅವರು ಕತೆ ಹೇಳುವುದಿಲ್ಲ ಅವರು ನೀಡುವ ತುಣುಕುಗಳಿಂದ ಓದುಗರೇ ಕತೆಯನ್ನು ಸಂಪೂರ್ಣಗೊಳಿಸುವಂತಹ ವಿಶೇಷತೆಗಳಿರುತ್ತವೆ. ಕತೆ ಪೂರ್ಣವಾಗಿರಬೇಕೆಂಬ ಹಟ ಅವರಿಗಿಲ್ಲ. ಕತೆಯ ಭಾವ ಓದುಗರ ಮನಸಿನ ಮೇಲೆ ಪರಿಣಾಮ ಬೀರಿದರೆ ಸಾಕು ಎಂಬ ಸ್ಪಷ್ಟತೆ ಇರುತ್ತದೆ. ಇಲ್ಲಿನ ಕತೆಗಳಲ್ಲಿ ಬಹಿರಂಗಕ್ಕಿಂತ ಅಂತರಂಗಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ. ಕತೆಗಳಲ್ಲಿ ಹುಡುಕಾಟವಿದೆ, ಆತ್ಮಶೋಧನೆಯೂ ಇದೆ. ಹಾಗಾಗಿ ಈ ಸಂಕಲನ ವರ್ತಮಾನದಲ್ಲಿ ಓದುಗರೇ ಕತೆಯಾಗಿ ಬಿಡುವ ವಿಭಿನ್ನತೆಯಿದೆ.
ನರೇಂದ್ರ ಪೈ ಅವರು ಕನ್ನಡದ ಖ್ಯಾತ ವಿಮರ್ಶಕರಲ್ಲಿ ಒಬ್ಬರು. ಸಾಹಿತ್ಯದ ಓದು- ಬರಹಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅವರು ಎರಡು ಕೃತಿಗಳನ್ನು ರಚಿಸಿದ್ದಾರೆ. ಅವರ ಹಲವಾರು ವಿಮರ್ಶಾ ಲೇಖನಗಳನ್ನು ಕನ್ನಡದ ಹಲವು ದೈನಂದಿನ ಪತ್ರಿಕೆ, ಮಾಸಿಕ ಮ್ಯಾಗಸೈನ್‌ಗಳಲ್ಲಿ ಪ್ರಕಟಗೊಂಡಿವೆ. ಕನ್ನಡದ ನೂರಾರು ಪುಸ್ತಕಗಳನ್ನು ವಿಮರ್ಶಿಸಿ ಪರೋಕ್ಷವಾಗಿ ಲೇಖಕರನ್ನು ತಿದ್ದುವ ಕೆಲಸ ಮಾಡಿದ್ದು, ಈ ಸಲುವಾಗಿ ‘ಟಿಪ್ಪಣಿಪುಸ್ತಕ’ ಎಂಬ ಬ್ಲಾಗ್ ತೆರೆದಿದ್ಧಾರೆ. ಅವರ ಎಲ್ಲಾ ವಿಮರ್ಶಾ ಲೇಖನಗಳನ್ನು ಅವರ ಬ್ಲಾಗ್ ನಲ್ಲಿಯೂ ಓದಬಹುದಾಗಿದೆ. ...
READ MORE