ಲೇಖಕ ದೀಪ್ ತ್ರಿವೇದಿ ಅವರ ಕೃತಿಯನ್ನು ಲೇಖಕಿ, ಕಥೆಗಾರ್ತಿ ರಾಜೇಶ್ವರಿ ಜಯಕೃಷ್ಣ ಅವರು ಅತ್ಯಂತ ಸರಳವಾಗಿ ಕನ್ನಡಕ್ಕೆ ‘101 ಸರ್ವಕಾಲಿಕ ಕಥೆಗಳು’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಈ ಕೃತಿಯು ಮಹಾನ್ ನಾಯಕರು, ತತ್ವ ಜ್ಞಾನಿಗಳು ಮತ್ತು ವಿಜ್ಞಾನಿಗಳ ಅದ್ಭುತ ಲೋಕಕ್ಕೆ ಓದುಗರನ್ನು ಕರೆದೊಯ್ಯುವ ಕುತೂಹಲಕಾರಿ ಕತೆಗಳನ್ನು ಒಳಗೊಂಡ ಕೃತಿ. ತಪ್ಪು-ಸರಿ, ಪಾಪ-ಪುಣ್ಯ, ಮುಂತಾದುವುಗಳ ಬಗೆಗೆಲ್ಲ ಚರ್ಚಿಸುತ್ತಾರೆ. ಮುಲ್ಲಾ ನಸ್ರುದ್ದೀನ್, ಬುದ್ಧನ ಜೀವನದ ಉಪಾಖ್ಯಾನ, ಮುಂತಾದ ಕಥೆಗಳೆಲ್ಲ ನಿಜಕ್ಕೂ ರತ್ನದ ಭಂಡಾರವೇ.. 66ನೇ ಕನ್ನಡ ರಾಜ್ಯೋತ್ಸವದ ವೇಳೆಯಲ್ಲಿ ಸಪ್ನ ಬುಕ್ ಹೌಸ್ ಪ್ರಕಾಶನದ ಮೂಲಕ ತೆರೆ ಕಂಡ ಕೃತಿಯಿದೆ. ಈ ಕೃತಿಗೆ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರ ಕೃತಿಗಳು: ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು , ಅಜ್ಜನ ಕಥೆಗಳು , ಪರಿಪೂರ್ಣ ಮಹಿಳೆ ನೀವು ಆಗಬಲ್ಲಿರಿ, ಮನಸೆ...ಓ...ಮನಸೇ, ಜನಜನಿತ ಗಾದೆಗಳು.ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು. ...
READ MORE