‘ಬುದ್ಧ ಚರಿತೆ’ ಬೌದ್ಧ ಧರ್ಮ ಮತ್ತು ಗೌತಮ ಬುದ್ಧನ ಕುರಿತ ಚಿಕ್ಕ ಕತೆಗಳ ಸಂಕಲನ. ಪೂರ್ಣಿಮಾ ಎಚ್. ಪೋತೆ ಅವರು ಅತ್ಯಂತ ಸರಳ ಭಾಷೆಯಲ್ಲಿ ಕತೆಗಳನ್ನು ರಚಿಸಿದ್ದಾರೆ.
‘ಬುದ್ಧ ಚರಿತೆ’ ಬುದ್ಧನ ಜನನದಿಂದ ಸಾವಿನವರೆಗಿನ ಜೀವನ ವಿವರಗಳನ್ನು ಚಿಕ್ಕ ಚಿಕ್ಕ ಕತೆಗಳ ಮೂಲಕ ಸರಳಭಾಷೆಯಲ್ಲಿ ಅನಾವರಣಗೊಳಿಸಲಾಗಿದೆ. ಮಕ್ಕಳಿಗಾಗಿ ಬರೆದ ಚರಿತೆಯಾದರೂ, ಬುದ್ದನ ಬದುಕಿನ ಮೇಲೆ ಹೊಸಬೆಳಕು ಬೀರುವಲ್ಲಿ ಯಶಸ್ವಿಯಾಗಿದೆ.
ಬುದ್ದನ ಬದುಕಿನುದ್ದಕ್ಕೂ ಘಟಿಸಿದ ಅನೇಕ ಪ್ರಸಂಗಗಳನ್ನು ದೃಷ್ಟಾಂತ, ಕಥನಗಳ ಮೂಲಕ ಎಳೆ ಎಳೆಯಾಗಿ ಬಿಡಿಸುತ್ತ ಹೋಗುವುದು ಈ ಕೃತಿಯ ವೈಶಿಷ್ಟ. ಎಲ್ಲೂ ಭಾಷಾಕ್ಲಿಷ್ಟತೆ, ಸಂಕೀರ್ಣತೆ ಸುಳಿದಿಲ್ಲ, ಶೈಲಿ ಅತ್ಯಂತ ಆಕರ್ಷಕವೂ, ಹೃದ್ಯವೂ ಆಗಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಈ ಕೃತಿ ಹೊಂದಿದೆ.
ಪೂರ್ಣಿಮಾ ಪೋತೆ ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನವರು. 1994ರ ಮೇ 24 ರಂದು ಜನನ. ಎಂ.ಎ. ಪದವೀಧರರು. ತಂದೆ ಲೇಖಕ ಎಚ್.ಟಿ.ಪೋತೆ, ತಾಯಿ- ಲಲಿತಾ ಎಚ್.ಪೋತೆ. ಇವರು ತಮ್ಕ ಕವಿತೆ, ವೈಚಾರಿಕ ಬರೆಹಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದಲ್ಲಿ ಐದು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಕೃತಿಗಳು- ಮುತ್ತುಗ(ಕವನ ಸಂಕಲನ), ಬುದ್ಧ ಚರಿತೆ(ಲೇಖನ ಸಂಕಲನ), ಡಾ.ಬಿ.ಆರ್. ಅಂಬೇಡ್ಕರ್ ಜನಸಾಮಾನ್ಯರ ರಕ್ಷಕ (ಜೀವನ ಚಿತ್ರಣ). ...
READ MORE