ಮನುಷ್ಟ ಸ್ವಭಾವದ ಬಿಂಬವಾಗಿರುವ ಈ ಇಲ್ಲಿನ ಕತೆಗಳು ನಮ್ಮೊಳಗಿನ ಬದುಕು ಬವಣೆ, ಹಾಡು-ಪಾಡುಗಳನ್ನು ತೆರೆದಿಡುತ್ತವೆ. ಗ್ರಾಮ್ಯತೆಯ ಸೊಗಡನ್ನು ಬೊಗಸೆಯಲ್ಲಿ ತುಂಬಿಕೊಡುವ ಅನ್ನ ಕತೆಗಳಾವೆ. ಗ್ರಾಮ್ಯ ನೆಲೆಯ ಸೂಕ್ಷ್ಮ ವ್ಯಕ್ತಿತ್ವ, ಭಾಷೆ, ಭಾವನೆಗಳನ್ನು ಕಥೆಗಳು ತೆರೆದಿಡುತ್ತವೆ. 'ಅನ್ನದ ಹುಡುಗಿ 'ಯ ನೈಜಚಿತ್ರಣ, 'ಮಲೆಯೂರು ಹುಚ್ಚಿ'ಯ ಸಂಕೀರ್ಣ ವ್ಯಕ್ತಿತ್ವ, 'ಬಾಂಧವ್ಯ'ದಲ್ಲಿನ ಅರಿವಿನ ಕೊರತೆ, 'ದೇವರ ಪಟ 'ದಲ್ಲಿನ ದೇವರ ಅಸ್ತಿತ್ವ ಹೀಗೆ ಅನೇಕ ನೆಲೆಗಳಲ್ಲಿ ಅನಾವರಣಗೊಳ್ಳುವ ಕತೆಗಳನ್ನು ಇಲ್ಲಿ ಕಾಣಬಹುದು.
ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು 3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...
READ MORE