ಜಗದೀಶಶರ್ಮಾ ಸಂಪ ಅವರ ‘ಭೀಷ್ಮ ಹೇಳಿದ ಮ್ಯಾನೇಜ್ ಮೆಂಟ್ ಕಥೆಗಳು ಮಾತು, ಕಥೆ, ಮಾತುಕಥೆ, ಕೃತಿಯು ನಿರ್ವಹಣೆಯ ಕುರಿತ ಕಥಾಸಂಕಲನವಾಗಿದೆ. ಇಲ್ಲಿ ಮಹಾಭಾರತದ ಕಥೆಯನ್ನು ಲೇಖಕರು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಇದು ಧೃತರಾಷ್ಟ್ರನ ಮಕ್ಕಳು ಮತ್ತು ಪಾಂಡುವಿನ ಮಕ್ಕಳ ಕಥೆ. ಹಾಗೆಯೇ ಇದು ಕೃಷ್ಣನ ಕಥೆ. ಭೀಷ್ಮ, ದ್ರೋಣ, ಕೃಪ, ಕರ್ಣ, ಅಶ್ವತ್ಥಾಮ, ಕುಂತಿ, ಮಾದ್ರಿ, ಗಾಂಧಾರಿ, ದ್ರೌಪದಿ, ಸುಭದ್ರೆ, ಭಾನುಮತಿ, ದ್ರುಪದ, ಧೃಷ್ಠದ್ಯುಮ್ನ, ಅಭಿಮನ್ಯು ಇವರೆಲ್ಲರ ಕಥೆ. ವಿಶೇಷವೆಂದರೆ ಇದು ಆ ಕಾಲದ ಕತೆಯಾಗಿದೆ. ವಿಚಿತ್ರವೆಂದರೆ ಇದು ಈ ಕಾಲದ ಕಥೆಯೂ ಆಗಿದೆ ಎಂದಿದ್ದಾರೆ. ಮಹಾಭಾರತ ಪ್ರಾಚೀನವಾಗಿರುವ ಸಮಕಾಲದಲ್ಲಿಯೇ ಆಧುನಿಕವೂ ಆಗಿದೆ. ಇದರಿಂದಾಗಿ ಇವತ್ತಿನ ಪ್ರಮುಖ ಕ್ಷೇತ್ರವಾದ ಮ್ಯಾನೇಜ್ ಮೆಂಟ್ ಕೂಡಾ ಲಭ್ಯ ಎಂದಿದ್ದಾರೆ. ಲೇಖಕ ಸಾಮಾಜಿಕ ತಾಣದಲ್ಲಿ ಬರೆಯುತ್ತಿದ್ದಂತಹ ಭೀಷ್ಮನ ಮಾತುಗಳು ಈ ಕೃತಿಯಲ್ಲಿವೆ.
ಈ ಕೃತಿಯ ಪರಿವಿಡಿಯು 3 ಭಾಗಗಳಾಗಿ ವಿಂಗಡನೆಗೊಂಡು ಕಥೆ, ಮಾತು, ಮಾತುಕಥೆಗಳಾಗಿ ಮಾರ್ಪಾಡಾಗಿ ಒಟ್ಟು 34 ಅಧ್ಯಾಯಗಳನ್ನು ಹೊಂದಿದೆ. ಕಂಡವರ ಮಾತು ಕೆಂಡದಂತೆ, ಮೈಮರೆತರೆ ವರವೂ ಶಾಪವೆ, ಕೊನೆಗೆ ನೀನೇನೋ ಅದೇ, ಅದಿಲ್ಲದಿದ್ದರೆ ನಾವಿಲ್ಲ, ಅದರ ಬೆನ್ನು ಹತ್ತಿದರೆ ಮುಗೀತು, ಯಾವಾಗ ಕೆಲಸ ಮಾಡೋದು, ಕೈಯಿದ್ದೂ ಸಾಯುವುದಾ, ಆಯಿತು ಎಂದುಕೊಂಡರೆ ಆಗಿರುವುದಿಲ್ಲ, ಬಾಗುವುದೋ ಬೀಗುವುದೋ, ಸೋತವ ಗೆದ್ದಾನು ಗೆದ್ದವ ಸೋತಾನು, ಈಗ ಮಾಡುವುದನ್ನು ಆಮೇಲೆ ಮಾಡೋನ, ಇಂದು ಮಾಡುವುದನ್ನು ನಾಳೆ ಮಾಡೋನ, ಅಲ್ಲಿಂದ ಎದ್ದಳು ಇಲ್ಲಿಗೆ ಬಂದಳು, ಏರಿದಷ್ಟೂ ಬಾಗಬೇಕು, ತಪ್ಪು ಯಾರು ಮಾಡಿದರೂ ತಪ್ಪೇ, ಒಳ್ಳೆಯತನಕ್ಕೆ ಗೆಲುವಿನ ಹಾದಿ, ಮಾತಿನಲ್ಲಿ ಮರಣ ಗೆದ್ದ, ಎಲ್ಲದಕ್ಕೂ ಅದೊಂದು ಸಾಕು, ಮುಳ್ಳು ಕಂಡಾಗ ದೂರ ಹೋಗು, ಅದೇ ಶ್ರೀಮಂತಿಕೆ, ಅವರಿಗೇಕೆ ಗೌರವ ಮುಂತಾದ ಆಧ್ಯಾಗಳನ್ನು ಪರಿವಿಡಿಯಲ್ಲಿ ಹೊಂದಿದೆ.
ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...
READ MORE