ಹೊಸ ಬೆಳಕು

Author : ರಾಜೇಶ್ವರೀ ಕುಮಾರ್ ರಾವ್

Pages 50

₹ 100.00




Year of Publication: 2024
Published by: ಸಾನ್ವಿಕ
Address: ಸಾನ್ವಿಕ, 132 ಹೊಸಪಾಳ್ಯ ಜಿ.ಬಿ. ಪಾಳ್ಯ ಏಳನೇ ಮುಖ್ಯ ರಸ್ತೆ, ಪೋಸ್ಟ್; ಮಡಿವಾಳ ಹೊಸೂರು ರೋಡ್, ಬೆಂಗಳೂರು- 560 068

Synopsys

‘ಹೊಸ ಬೆಳಕು’ ರಾಜೇಶ್ವರೀ ರಾವ್ ಅವರ ಚೊಚ್ಚಲ ಸಣ್ಣ ಕಥಾ ಸಂಗ್ರಹವಾಗಿದೆ. ಇದಕ್ಕೆ ಅರವಿಂದ ರಾವ್ ಅವರ ಮುನ್ನುಡಿ ಬರಹವಿದೆ; ‘ಅನಾವರಣ’ ಒಂದು ಹಳ್ಳಿಯ ಒಬ್ಬ ಬೆಲೆವೆಣ್ಣು ಮೇಲುಕೀಳೆಂಬ ಅಂತರವಿಲ್ಲದೆ ಹಾಸುಹೊಕ್ಕಾಗಿ ಯಾವರೀತಿಯಲ್ಲಿ ಸಮಾಜದಲ್ಲಿ ಕೋಲಾಹಲ ತಂದಿಡಬಹುದು ಎಂಬ ಚಿತ್ರಣ ನೈಜವಾಗಿ ಈ ಪುಸ್ತಕದಲ್ಲಿ ಮೂಡಿ ಬಂದಿದೆ. ಲೇಖಕಿಯ ಕಥಾಲೇಖನ ಚಾತುರ್ಯಕ್ಕೆ ಒಳ್ಳೆಯ ಭವಿಷ್ಯವಿದೆ ಎಂದು ಇಲ್ಲಿ ಚೆನ್ನಾಗಿ ಕಾಣುತ್ತದೆ. ಇನ್ನೂ ಕೆಲವು ಕಥೆಗಳು, ಚಟುಕಥೆಗಳನ್ನೂ ಈ ಪುಸ್ತಕ ಒಳಗೊಂಡಿದೆ.

About the Author

ರಾಜೇಶ್ವರೀ ಕುಮಾರ್ ರಾವ್

ರಾಜೇಶ್ವರೀ ಕುಮಾರ್ ರಾವ್ ಅವರು ಮೂಲತ:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದವರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಲ್ಲಡ್ಕ, ಪಾಣೆಮಂಗಳೂರಿನಲ್ಲಿ, ಪದವಿಪೂರ್ವ ವಿದ್ಯಾಭ್ಯಾಸವನ್ನು ವಿಟ್ಲದಲ್ಲಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಎ. ಪದವಿ, ಬಿ.ಎಡ್. ಹಾಗೂ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ನೂರಾರು ಕಥೆಗಳನ್ನು ಬರೆದಿದ್ದು, ಒಂದಷ್ಟು ಕಥೆಗಳು ಈಗಾಗಲೇ ಹಲವಾರು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿದೆ. ...

READ MORE

Related Books