ಡಾ. ಶ್ರೀದೇವಿ ಎಲ್ ರಾಠೋಡ ಅವರ `ಬದುಕಿನ ಅಲೆ' ಕಥಾ ಸಂಕಲನವಾಗಿದೆ. ಒಟ್ಟು 7 ಕಥೆಗಳು ಸಂಕಲನಗೊಂಡಿವೆ. ಸ್ತ್ರೀ ಮನದ ತುಡಿತ. ಸಾಮಾಜಿಕ ಸಂಘರ್ಷ, ನಿರುದ್ಯೋಗ ಸಮಸ್ಯೆ, ಜನ್ಮ ಜನ್ಮಾಂತರದ ಬೆಸುಗೆ, ಖೈದಿಗಳ ಸಮಸ್ಯೆ, ಬಡತನ, ಮುಂತಾದ ವಿಷಯಗಳನ್ನು ವಿಶ್ಲೇಷಿಸುವ ಕಥೆಗಳಾಗಿವೆ.
ಆತ್ಮ, ಇಂತಿ ನಿನ್ನ....., ಜಲ್ ಪರಿ, ಖೈದಿ, ಮೌನ, ನಿರುದ್ಯೋಗಿ, ವಿಧಿ, ಕಥೆಗಳು ಸ್ತ್ರೀ ಮನದ ತುಡಿತ. ಸಾಮಾಜಿಕ ಸಂಘರ್ಷ, ನಿರುದ್ಯೋಗ ಸಮಸ್ಯೆ, ಜನ್ಮ ಜನ್ಮಾಂತರದ ಬೆಸುಗೆ, ಖೈದಿಗಳ ಸಮಸ್ಯೆ, ಬಡತನ, ಮುಂತಾದ ವಿಷಯಗಳನ್ನು ವಿಶ್ಲೇಷಿಸುವ ಕಥೆಗಳಾಗಿವೆ.
ಆತ್ಮ ಕಥೆಯು ಎರೆ ಹುಳು ಹುಟ್ಟಿನಿಂದ ಪ್ರಾರಂಭವಾಗಿ ಅದನ್ನು ಕೋಳಿ ತಿಂದಾಗ ಮರುಜನ್ಮ ಕೋಳಿಯಾಗಿ ಹುಟ್ಟುತ್ತದೆ. ಮನುಷ್ಯ ಕೋಳಿ ತಿಂದಾಗ ಮನುಷ್ಯ ಜನ್ಮ ತಾಳಿ ಜನ್ಮಾಂತರದ ಬದುಕು ನಡೆಸಿದರು. ಆತ್ಮ ತೃಪ್ತಿ ಆಗದೆ ಮುಕ್ತಿ ಪಡೆಯಲು ಹವಣಿಸಿದಾಗ ಕೊನೆಗೆ ಮುಕ್ತಿ ಪಡೆಯಲು ಸಾಧ್ಯ ಎಂಬ ಮಾತನ್ನು ಇಲ್ಲಿ ವಿವರಿಸಲಾಗಿದೆ.
ಇಂತಿ ನಿನ್ನ... ಕಥೆಯಲ್ಲಿ ಕುಂಟ ಹುಡುಗಿ ಮತ್ತು ಮೂಗ ಹುಡುಗನ ಕಥೆಯಾಗಿದ್ದು, ನಿಜವಾದ ಪ್ರೀತಿಗೆ ಜಾತಿ, ಮತ, ಭಾಷೆ, ಗಡಿ, ಅಂದ ,ಚೆಂದ, ಆಸ್ತಿ, ಐಶ್ವರ್ಯ, ಯಾವುದೂ ಲೆಕ್ಕಕ್ಕೇ ಬರುವುದಿಲ್ಲ ಎಂಬುದನ್ನು ಬಿಂಬಿಸುವ ಕಥೆ.
ಜಲ್ ಪರಿ ಕಥೆಯು ಸೃಷ್ಟಿಯ ನಿಗೂಢ ರಹಸ್ಯದ ಕುರಿತು ವಿವರಣೆ ನೀಡುವ ಕಥೆಯಾಗಿದೆ. ಮತ್ತು ಪರಿಸರ ಸಂರಕ್ಷಣೆಗಾಗಿ ಮಾನವ ಮಾಡಬೇಕಾದ ವ್ಯವಸ್ಥೆ ಕುರಿತು ವಿಶ್ಲೇಷಣೆಯ ಕಥೆ. ಖೈದಿ ಕಥೆಯು ಸಾಮಾನ್ಯ ಮನುಷ್ಯ ಯಾವುದೋ ಜಾಲಕ್ಕೆ ಸಿಕ್ಕು ಸಮಸ್ಯೆಯ ಸುಳಿಯಲ್ಲಿ ಜೈಲು ಸೇರಿದವರಿಗೆ ಆಗುವ ಹಿಂಸೆ ಅನುಭವಿಸುವ ನೋವು ಮತ್ತು ಪಾರಾಗಲು ಮಾಡುವ ಕಸರತ್ತು ಕುರಿತ ವಿಷಯವಾಗಿದೆ.
ಮೌನ ಕಥೆ ಬಾಂಗ್ಲಾ ದೇಶದ ವಿಚ್ಛೇದಿತ ಮಹಿಳೆಯನ್ನು ಕೆಲಸ ಕೊಡಿಸುವ ನೆಪವೊಡ್ಡಿ ಅವಳನ್ನು ಅತ್ಯಾಚಾರ ಮಾಡಿ ವೇಶಾವೃತಿಗೆ ತಳ್ಳುವ ಕಥೆ ಇಂತಹ ಸಮಸ್ಯೆಯಲ್ಲಿ ಸಿಕ್ಕ ಅವಳ ಜೀವನ ಅನೇಕ ಯಾತನೆ ಅನುಭವಿಸಿದ ನಂತರ ಅದೇ ಬದುಕನ್ನು ಒಪ್ಪಿ ಕೊಂಡು ಮೌನ ವಾಗಿರುವ ಕಥೆ.
ಬಡಕುಟಂಬ ದಿಂದ ಬಂದ ವ್ಯಕ್ತಿ , ಆನೇಕ ಸಮಸ್ಯೆಗಳ ಮಧ್ಯೆ ಉನ್ನತ ಶಿಕ್ಷಣ ಪಡೆದು ಕೆಲಸಕ್ಕಾಗಿ ಅಲೆದಾಡಿ ಸೋತು ಹೋದಾಗ ಮುಂದೆ ಬದುಕಿನ ಪ್ರಶ್ನೆ ಕಾಡಿದಾಗ ಕೃಷಿ ಅವನ ಕೈ ಹಿಡಿದು ಅತ್ಯುತ್ತಮ ಕೃಷಿಕ ಎಂಬ ಬಿರುದು ಪಡೆದು ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಕಥೆ ಇದು. ಮೋಸ ವಂಚನೆ ಮತ್ತು ಡ್ರಗ ಜಾಲದ ಕಥೆ ‘ವಿಧಿ’ ಆಗಿದೆ.
ಡಾ. ಶ್ರೀದೇವಿ ಎಲ್ ರಾಠೋಡ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕನಕಪುರ ತಾಂಡಾದವರು. ತಂದೆ ಎಲ್ ಸೋಮಪ್ಪ, ತಾಯಿ ಪ್ರೇಮಬಾಯಿ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ. ಎ ಹಾಗೂ ಕುಂಚಿ ಕೊರವ ಮಹಿಳೆಯರ ಸಬಲೀಕರಣ ವಿಷಯವಾಗಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದಿದ್ದಾರೆ. ಯು. ಜಿ. ಸಿ ಧನಸಹಾಯ ಆಯೋಗದಿಂದ ಪೋಸ್ಟ್ ಡಾಕ್ಟರಲ್ ಪದವಿಯನ್ನು ಗುಲಬಗಾ೯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸದಾ ಮಹಿಳಾ ಪರ ಕಾಳಜಿ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆಯ ನಂದೂರು ಬಿ. ಅಂಚೆ ವ್ಯಾಪ್ತಿಯ ಬಾಪುನಾಯಕ ತಾಂಡದಲ್ಲಿ ವಾಸವಿದ್ದಾರೆ. ಲಂಬಾಣಿ ಸಮುದಾಯ ಅಹಾರ ಪದ್ಧತಿ, ಕಂಚಿ ಕೋರವರ ಆಹಾರ ಪದ್ಧತಿ, ಚಿಂದಿ ಆಯುವ ಮಹಿಳೆ ಮತ್ತು ...
READ MORE