ಕಥೆಗಾರ, ಬರಹಗಾರರಾದ ವಸುಧೇಂದ್ರ ಅವರ ಏಳು ಕತೆಗಳ ಸಂಗ್ರಹ ಕೃತಿ ’ಚೇಳು’.
ಲೇಖಕರ ಊರಾದ ಬಳ್ಳಾರಿಯಲ್ಲಿ ಚೇಳುಗಳ ಹಾವಳಿ ತುಂಬಾ. ಮದುವೆಯಾದರೂ ಮಕ್ಕಳಿಲ್ಲದ ವೆಂಕಮ್ಮ ಊರಿಗೆ ಬಂದ ಭೈರವ್ ಬಾಬಾನ ಮೊರೆ ಹೋಗುತ್ತಾಳೆ. ಆದರೆ ಭೈರವ್ ಬಾಬಾ ವೆಂಕಮ್ಮನನ್ನು ದೈಹಿಕವಾಗಿ ಬಳಸಿಕೊಳ್ಳುವಾಗ ಸಿಕ್ಕಿಬೀಳುತ್ತಾನೆ. ಊರಿನ ಜನ ಇಬ್ಬರಿಗೂ ಛೀಮಾರಿ ಹಾಕಿ ದೂರವಿಡುತ್ತಾರೆ. ಆದರೆ ಭೈರವ್ ಬಾಬಾ ತನ್ನಿಂದಾದ ಅನಾಹುತಕ್ಕೆ ಪರಿಹಾರವೆಂಬಂತೆ ವೆಂಕಮ್ಮನಿಗೆ ಚೇಳಿನ ಮಂತ್ರವನ್ನು ಹೇಳಿಕೊಡುತ್ತಾನೆ. ಅಂದಿನಿಂದ ಊರಿನಲ್ಲಿ ವೆಂಕಮ್ಮನ ಸ್ಥಿತಿ ಬದಲಾಗುತ್ತದೆ.
ಅನಘ ಕಥೆ ಸಲಿಂಗಿ ಕಲ್ಲೇಶಿಯ ಕುರಿತಾದರೆ, ಭಾರತದ ಟೆಕ್ಕಿ ವಿದೇಶದಲ್ಲಿದ್ದಾಗ ನಡೆಯುವ ಕಥೆಯಾಗಿದೆ.
ಶ್ರೀದೇವಿ ಎಂಬ ಕತೆ ಅಮಾಯಕತನ, ಸಣ್ಣಬುದ್ಧಿಗಳು, ಬೆರಗುಗಳ ಕುರಿತಾದದ್ದು. ಹೀಗೆ ಇಲ್ಲಿರುವ ಎಲ್ಲ ಕತೆಗಳು ನವಿರಾದ ಹಾಸ್ಯ, ಕಥಾ ಹಂದರಗಳಿಂದ ಹೆಣೆದಿದೆ.
ವಸುಧೇಂದ್ರ ಅವರು ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು. ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಆನಂತರ ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಯ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅವರು ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು, ಸದ್ಯಕ್ಕೆ ಸಾಹಿತ್ಯಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ...
READ MORE