ಕಾವ್ಯ, ನಾಟಕ, ಕಾದಂಬರಿ, ಪ್ರಬಂಧ ಮೊದಲಾದ ಹಲವು ಪ್ರಕಾರಗಳಲ್ಲಿ ವೈದೇಹಿ ಅವರು ಕೃತಿ ರಚನೆ ಮಾಡಿದ್ದಾರೆ. ಆದರೆ, ಅವರ ಬರಹದಲ್ಲಿ ಬಹುಸಂಖ್ಯೆಯಲ್ಲಿ ಇರುವುದು ಕಥೆಗಳು. 1979ರಿಂದ ಕತೆಗಳನ್ನು ಬರೆಯುತ್ತಿರುವ ವೈದೇಹಿವರು ಅದೇ ವರ್ಷ ಅವರ ಮೊದಲ ಕಥಾಸಂಕಲನ `ಮರ ಗಿಡ ಬಳ್ಳಿ' ಪ್ರಕಟವಾಯಿತು. 2016ರಲ್ಲಿ ಅವರ ಇತ್ತೀಚಿನ ಕಥಾಸಂಕಲನ `ಕತೆ ಕತೆ ಕಾರಣ' ಪ್ರಕಟವಾಯಿತು. ಇದುವರೆಗೆ ವೈದೇಹಿ ಅವರು ಏಳು ಕಥಾಸಂಕಲನ ಪ್ರಕಟಿಸಿದ್ದಾರೆ. ಅವರ ಒಟ್ಟು ತೊಂಬತ್ತೊಂದು ಕಥೆಗಳು ಈ ಸಮಗ್ರ ಕಥಾ ಸಂಪುಟದಲ್ಲಿವೆ. ಈ ಸಂಗ್ರಹವು ಅವರ ಈವರೆಗಿನ ಎಲ್ಲ ಕತೆಗಳನ್ನು ಒಟ್ಟಾಗಿಸಲಾಗಿದೆ.
ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...
READ MORE