ಚಿನ್ನದ ಚೂರಿ

Author : ನಾಗೇಶ್ ಜೆ. ನಾಯಕ

Pages 72

₹ 80.00




Year of Publication: 2019
Published by: ಆದಿತ್ಯ ಪಬ್ಲಿಕೇಷನ್
Address: ಎಲ್. ಐ.ಜಿ. 49, ಮಹಾಂತೇಶ ನಗರ, ಬೆಳಗಾವಿ
Phone: 9902791799

Synopsys

'ಚಿನ್ನದ ಚೂರಿ' ನಾಗೇಶ್ ಜೆ. ನಾಯಕ ಅವರ ಸಣ್ಣ ಕಥೆಗಳ ಸಂಗ್ರಹವಾಗಿದೆ. ಇದಕ್ಕೆ ಅಬ್ಬಾಸ್ ಮೇಲಿನಮನಿ ಅವರ ಬೆನ್ನುಡಿ ಬರಹವಿದೆ;  ಕೃತಿಯ ಕುರಿತು ಬರೆಯುತ್ತಾ 'ಕಾವ್ಯ, ಕಥೆ, ಪುಸ್ತಕ ವಿಮರ್ಶೆ, ಅಂಕಣ ಬರಹಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿಕೊಂಡಿರುವ ನಾಗೇಶ್ ಜೆ. ನಾಯಕ ಒಬ್ಬ ಅಪರೂಪದ ಸ್ನೇಹಜೀವಿ. ತಮ್ಮ ಶಿಕ್ಷಕ ವೃತ್ತಿ ಮತ್ತು ಸೃಜನಶೀಲ ಪ್ರವೃತ್ತಿಗಳ ಸಾತತ್ಯದ ಬೆರಗನ್ನು ನಿತಾಂತವಾಗಿಸಿಕೊಂಡಿರುವ ಈ ಲೇಖಕನ ಧ್ಯಾನಸ್ಥತೆ ಗಮನಾರ್ಹ. ಇದರ ಹೊಳಹು 'ಚಿನ್ನದ ಚೂರಿ' ಕಥಾ ಸಂಕಲನದಲ್ಲೂ ಗರಿಗಟ್ಟಿದೆ. ಚಿಕ್ಕ ಪರಿಧಿಯಲ್ಲಿ ವಿನ್ಯಾಸಗೊಂಡಿರುವ ಇಲ್ಲಿನ ಕಥೆಗಳು ಲೋಕಾನುಭವಗಳನ್ನು ನೇರ ಮತ್ತು ಸರಳವೆಂಬಂತೆ ಬಿಂಬಿಸುತ್ತ ಜೀವಪ್ರೀತಿಯ ಕಾಳಜಿಗಾಗಿ ತುಡಿಯುತ್ತವೆ. ಮುಖ್ಯವಾಗಿ ವರ್ತಮಾನದ ಯುವ ಮನಸ್ಸುಗಳನ್ನು ವ್ಯಾಧಿಯಂತೆ ಆವರಿಸಿಕೊಂಡಿರುವ ಭ್ರಾಮಕ ಸಂಗತಿಗಳು, ಅವರನ್ನು ಬದುಕಿನ ಮೌಲ್ಯಗಳಿಂದ ವಂಚಿಸಿ, ವಿಕೃತ, ವಿಕ್ಷಿಪ್ತ ಕ್ರಿಯೆಗಳ ದುರಂತ ಸಾಕ್ಷಿಪ್ರಜ್ಞೆಯಾಗಿಸುವುದರ ವಾಸ್ತವವನ್ನು ಮನೋಗತವಾಗಿಸುತ್ತವೆ. ಮನುಷ್ಯತ್ವ ಮತ್ತು ಮಾನವೀಯತೆಯ ಬೇರುಗಳನ್ನು ಕಳಚಿಕೊಂಡ, ಜಾತಿ, ಧರ್ಮಾಂಧತೆ, ಅಸ್ಪೃಶ್ಯತೆ, ಮೌಡ್ಯತೆಗಳನ್ನು ಧಾರಣ ಮಾಡಿಕೊಂಡ ಮತಿ ಮನಸುಗಳಿಂದ ಸರ್ವೋದಯ ಅಥವಾ ಸಮ ಸಮಾಜವನ್ನು ಅನಾವರಣಗೊಳಿಸುವುದು ಅಸಾಧ್ಯವೆಂಬುದರ ಸೂಕ್ಷ್ಮವನ್ನು ಗ್ರಹಿಕೆಗೆ ನಿಲುಕಿಸುವ ಕೆಲವು ಕಥೆಗಳು ಬುದ್ಧ ಬೆಳಕಿನ ಪ್ರತೀಕಗಳಾಗಿ ಪ್ರಭಾವಿಸುವಂತಿವೆ. ಬದುಕಿನ ಒತ್ತಡದ ಧಾವಂತದ ನಡುವೆ, ಓದಿನ ವ್ಯವಧಾನಕ್ಕೆ ಸವಾಲಾಗಿರುವ ಹೊರಳಿನಲ್ಲಿ, ಕಾಲಮಿತಿಗೆ ಒಳಪಟ್ಟು ಓದಿಸಿಕೊಳ್ಳುವ ಇಲ್ಲಿನ ಕಥೆಗಳು, ಹರವಿನ ಅಪೇಕ್ಷೆಯಲ್ಲೂ ಥ್ರಿಲ್ ಹುಟ್ಟಿಸುತ್ತವೆ.

About the Author

ನಾಗೇಶ್ ಜೆ. ನಾಯಕ
(23 February 1975)

ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ  ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...

READ MORE

Related Books