ಇಲ್ಲಿಯ ಕತೆಗಳಲ್ಲಿ ಗಂಡು ಹೆಣ್ಣಿನ ನಡುವಿನ ಸಂಬಂಧ, ಕಾಮದ ತಾಕಲಾಟ, ಅವರ ಮನೋಧರ್ಮವನ್ನು ಅರಿಯುವ ತವಕವಿದೆ. ಓದಿಗೆ ವೈವಿಧ್ಯಮಯ ಕಥಾ ಹಂದರವಿದ್ದು ಅನ್ಯ ಸಮುದಾಯಗಳ ಪಾತ್ರಗಳ ಒಳಹೊಕ್ಕು ಲೋಕವನ್ನು ತೆರೆದಿಡುವ ಪ್ರಯತ್ನವಿದೆ. 2020ನೇ ಸಾಲಿನ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿಗೆ ಕೃತಿಯು ಭಾಜನವಾಗಿದೆ.
ಯುವ ಕತೆಗಾರ, ಪ್ರಬಂಧಕಾರ ಮುಸ್ತಾಫ ಕೆ. ಎಚ್. ಹುಟ್ಟಿದ್ದು ಕೊಡಗು ಜಿಲ್ಲೆಯ ಮಾದಾಪುರ ಗ್ರಾಮದಲ್ಲಿ. ಮಂಗಳೂರು ವಿಶ್ವವಿದ್ಯಾಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವೀಧರರು. ಚಿನ್ನದ ಪದಕ ಸಹಿತ ಪ್ರಥಮ ರ್‍ಯಾಂಕ್ ಹಾಗೂ 5 ದತ್ತಿ ನಿಧಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪ್ರಸ್ತುತ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 'ಕನ್ನಡ ಸಾಹಿತ್ಯ ಸಂಸ್ಕೃತಿ ವಿಮರ್ಶೆ: ಕಿ ರಂ ನಾಗರಾಜ ಮಾದರಿ' ವಿಷಯ ಕುರಿತು ಪ್ರಬಂಧ ಮಂಡಿಸಿ ಪಿ.ಎಚ್.ಡಿ. ಪಡೆದಿದ್ದಾರೆ. 2015ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರ ಪ್ರಕಟಣೆಯಲ್ಲಿ 'ಕಂಡದ್ದು ಕಾಡಿದ್ದು' ...
READ MORE