ಸೋಲಿನ ನೆಪವೇಕೆ ಗೆಲುವಿನ ಜಪವಿರಲಿ ಸಂತೋಷ್ ರಾವ್ ಪೆರ್ಮುಡ ಅವರ ಕೃತಿಯಾಗಿದೆ. ಈ ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವೂ, ಜೀವಿಯೂ ಭಿನ್ನವಾಗಿವೆ. ಅದರಲ್ಲೂ ಮನುಷ್ಯನೆಂಬ ಜೀವಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ಸೃಷ್ಟಿಯೇ ಸರಿ! ಪ್ರತಿಯೊಬ್ಬ ವ್ಯಕ್ತಿಯೂ ದೈಹಿಕವಾಗಿ, ಮಾನಸಿಕವಾಗಿ ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಪ್ರತಿಯೊಬ್ಬರಿಗೂ ಅವರದೇ ಆದ ಶಕ್ತಿ-ಯುಕ್ತಿಗಳು ಇರುತ್ತವೆ. ಜೊತೆಗೆ ಇತಿ-ಮಿತಿಗಳು ಕೂಡ. ಅದೃಷ್ಟಕ್ಕೆ ಮಾನವನಿಗೆ ತನ್ನ ಶಕ್ತಿಯುಕ್ತಿಗಳನ್ನು ಸಾಣೆ ಹಿಡಿಯಲು, ಇತಿಮಿತಿಗಳನ್ನು ಮೀರಲು ಬಹಳಷ್ಟು ಅವಕಾಶಗಳಿವೆ. ಅಂತಹ ಅವಕಾಶಗಳಲ್ಲಿ ಪ್ರಮುಖವಾದುದು ಪುಸ್ತಕಗಳ ಓದು. ಈ ನಿಟ್ಟಿನಲ್ಲಿ ಸಂತೋಷ್ ರಾವ್ ಪೆರ್ಮುಡ ಅವರ “ಸೋಲಿನ ನೆಪವೇಕೆ, ಗೆಲುವಿನ ಜಪವಿರಲಿ" ಪುಸ್ತಕವನ್ನು ಇಂತಹ ಪುಸ್ತಕಗಳ ಸಾಲಿಗೆ ಸೇರಿಸಿಕೊಳ್ಳಬಹುದಾಗಿದೆ. ಈಗಾಗಲೇ ವ್ಯಕ್ತಿತ್ವ ವಿಕಸನ ಪ್ರಕಾರದ ಸಾಹಿತ್ಯ ಕೃಷಿಯಲ್ಲಿ ಸಿದ್ಧಹಸ್ತರಾಗಿರುವ ಸಂತೋಷ್ ಅವರ ಈ ಪುಸ್ತಕದ ಲೇಖನಗಳು ಹಲವು ವ್ಯಕ್ತಿಗಳ ನಾಡಿಗಳನ್ನು ಹಿಡಿದು ಬರೆದಿರುವಂತಿವೆ. ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೆ ಈ ಸಂಕಲನದ ಲೇಖನಗಳು ನೆರವಾಗಬಲ್ಲವು, ತಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಇಚ್ಚಿಸುವವರಿಗೂ ಇದು ಉಪಯುಕ್ತವಾಗಬಲ್ಲ ಪುಸ್ತಕ, ತಮ್ಮ ಬರವಣಿಗೆಯ ಮೂಲಕ ವ್ಯಕ್ತಿತ್ವ ವಿಕಸನಕ್ಕೆ, ಕೌಶಲ್ಯಾಭಿವೃದ್ಧಿಗೆ ನೆರವಾಗಬಲ್ಲದು ಎಂದು ಗುಬ್ಬಚ್ಚಿ ಸತೀಶ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.
©2024 Book Brahma Private Limited.