ಖ್ಯಾತ ಕಥೆಗಾರ ಬೊಳುವಾರು ಮಹಮದ್ ಕುಂಞ್ ಅವರ ಕಥೆಗಳ ಸಂಕಲನ-ಒಂದು ತುಂಡು ಗೋಡೆ. ಇಲ್ಲಿಯ ಬಹುತೇಕ ಕಥೆಗಳು ಸಮಾಜವನ್ನು ವಿಡಂಬಿಸುತ್ತವೆ. ಮನುಷ್ಯನು ಮತ್ತೊಬ್ಬ ಮನುಷ್ಯನನ್ನು ಮನುಷ್ಯನಂತೆ ಕಾಣಲಾರದ ಸ್ಥಿತಿಗೆ ಈ ಸಮಾಜ ತಂದು ಇಟ್ಟಿದೆ. ಆ ಮೂಲಕ ಶೋಷಣೆಯೇ ತನ್ನ ಉಸಿರಾಗಿಸಿದೆ. ಇಂತಹ ಸಮಾಜದ ರೂಪಕರು ಮಾತ್ರ ಹಾಯಾಗಿದ್ದಾರೆ. ಈ ವ್ಯವಸ್ಥೇ ಮುರಿದು ಬೀಳಬಾರದು ಎಂಬ ಎಚ್ಚರಿಕೆ ಸದಾ ಅವರಲ್ಲಿದೆ. ಸಮಾಜದ ವಿರುದ್ಧ ಸಿಡಿದೇಳದಂತೆ ಜನರ ಮೇಲೆ ಕೋಮು ಅಥವಾ ಮೌಢ್ಯದ ಹೊರೆ ಹೊರಿಸಲಾಗುತ್ತಿದೆ. ಮಾನವೀಯ ಎಳೆಯು ಎಲ್ಲೂ ಸಿಗದಂತೆ ಸಂಬಂಧಗಳನ್ನು ಕತ್ತರಿಸಲಾಗುತ್ತಿದೆ. ಇಂತಹ ಭಾವವಿರುವ ಕಥೆಗಳು ಓದುಗರನ್ನು ಹೊಸ ಚಿಂತನೆಯತ್ತ ಸೆಳೆದೊಯ್ಯುತ್ತವೆ. ಲೇಖಕರು ಮೂಲತಃ ಕಥೆಗಾರರು. ಅವರ ಸೂಕ್ಷ್ಮ ಹೆಣಿಕೆಯ ಕೌಶಲವನ್ನು ಕಥಾ ವಸ್ತು, ಪಾತ್ರಗಳ ಸೃಷ್ಟಿ, ಸನ್ನಿವೇಗಳ ಜೋಡಣೆ ಇತಂಹ ಸಾಹಿತ್ಯಕ ಅಂಶಗಳಲ್ಲಿ ಕಾಣಬಹುದು.
ಕನ್ನಡದ ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ...
READ MORE